ಚಿತ್ರ ವಿಮರ್ಶೆ : ‘ಆಟಕ್ಕೂ ಉಂಟು.. ಲೆಕ್ಕಕ್ಕೂ ಉಂಟು..’.

ಚಿತ್ರ ವಿಮರ್ಶೆ :’ಆಟಕ್ಕೂ ಉಂಟು.. ಲೆಕ್ಕಕ್ಕಿಲ್ಲ

ಪ್ರೇಕ್ಷಕನನ್ನೂ ಚಿತ್ರದ ಕೊನೆಯವೆರಗೂ ಕನ್ಫೂಶನ್ ಮಾಡುತ್ತಾಲೇ ಎಂಗೇಜ್ ಆಗಿಟ್ಟು, ಕ್ಲೈಮಾಕ್ಸ್‍ನಲ್ಲಿ ಒಂದು ಕನ್‍ಕ್ಲೂಶನ್ ಕೊಡುವ ಚಿತ್ರಗಳು ಸಾಕಷ್ಟು ರೋಚಕ ಅನುಭವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಇಂತಹ ರೋಚಕ ಅನುಭವ ನಿಮ್ಮದಾಗಬೇಕೆಂದರೆ ತಪ್ಪದೇ ನೋಡಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರ.
ಮಾನಸಿಕ ಹೋಯ್ದಾಟ-ತೊಯ್ದಾಟದಲ್ಲಿ ಸಾಗುವ ಪಾತ್ರಗಳು ಮುಂದಿನ ದೃಶ್ಯದಲ್ಲಿ ಯಾವರೀತಿ ಬಿಹೇವ್ ಮಾಡಬಲ್ಲುದು ಎಂಬ ಕುತೂಹಲವನ್ನು ಮಾಡಿಸುತ್ತದೆ. ಅವರವರ ನಂಬಿಕೆ ಹೇಗೆ ಆಟ ಆಡಿಸಿ ಮಜಾ ತಗೊಳುತ್ತೇ ಅನ್ನೋದು ಇಂಟ್ರೆಸ್ಟಿಂಗ್ ಸಂಗ್ತಿ. ಸೈಕಲಾಜಿಕಲ್ ಮರ್ಡರ್ ಮಿಸ್ಟರಿಯನ್ನು ತಮ್ಮ ಚೊಚ್ಚಲ ಚಿತ್ರದಲ್ಲೇ ನಿರ್ದೇಶಕ ರಾಮಚಂದ್ರ ಅವರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

ಹಾಗಿದ್ದರೆ ಈ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದ ಲೆಕ್ಕಗೆ ಸಿಗುವ ಕಥೆಯ ಎಳೆ ಏನು ಎಂಬುದನ್ನು ನೋಡೋಣ.15 ವರ್ಷದ ಹಿಂದೆ ಅಮೃತ ನಿಲಯ ಅನ್ನೋ ಮನೆಯಲ್ಲಿ ಒಂದು ದುರ್ಘಟನೆ ನಡೆದಿರುತ್ತೆ. ಆ ಮನೆಗೆ ಹೊಸದಾಗಿ ಮದುವೆಯಾಗಿ ಒಂದು ಜೋಡಿ ಬಂದಿರುತ್ತದೆ. ಕಹಿ ಘಟನೆಯ ನೆನಪಿನ ನೆರಳು ಆ ಮನೆಯ ಸುತ್ತಾ ಸದಾ ಸುತ್ತುತ್ತಿರುತ್ತೆ. ಆ ನೆರಳು ಹೊಸ ಜೋಡಿಯ ಮೇಲೆ ಬೀಳುತ್ತದೆ. ಆ ನೆರಳಿನ ಫ್ಲಾಶ್ ಬ್ಯಾಕ್ ಮತ್ತು ಪ್ರೆಸೆಂಟ್ ಸಿಚ್ಯುವೆಷನ್ ಎರಡೂ ಬ್ಲೆಂಡ್ ಆಗುತ್ತ ಆಗುತ್ತ ಸಿನಿಮಾ ಕೊನೆ ತನಕ ಸಾಗುತ್ತೆ. ಸಿನಿಮಾ ಫಸ್ಟ್ ಹಾಫ್ ಸಿಗುವ ಉತ್ತರ ಕ್ಲೈಮ್ಯಾಕ್ಸ್ ಹೊತ್ತಿಗೆ ಅದು ತಪ್ಪು ಎಂದು ಸಿನಿಮಾ ಸಾರಿ ಹೇಳುತ್ತದೆ. ಒಂದು ಸೈಕಲಾಜಿಕಲ್ ಮರ್ಡರ್ , ಸಸ್ಪೆನ್ಸ್ ಹಾರರ್ ಕಥಾನಕ ಥ್ರಿಲ್ಲ್ ಆಗಿ ಎಂಡ್ ಆಗುತ್ತದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದೊಂದು ಸೈಕಲಾಜಿಕಲ್ ಮರ್ಡರ್ ಮಿಸ್ಟರಿ ಸಿನಿಮಾ. ಒಬ್ಬನ ಅನುಮಾನಾಸ್ಪದ ಮನೋವೇದನೆ , ಒಂದು ಕೊಲೆ , ದೆವ್ವ ಭೂತದ ಆಟ ಪ್ಲಸ್ ಕಾಟದ ಸಮ್ಮಿಶ್ರಣವನ್ನು ಮಲ್ಟಿ ಲೇಯರ್ ಸ್ಟೋರಿಯನ್ನಾಗಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕರು.
ಚಿತ್ರದಲ್ಲಿ ಸಂಚಾರಿ ವಿಜಯ್ , ಮಯೂರಿ , ದುನಿಯಾ ರಶ್ಮಿ , ಗೌತಮ್. ಇವ್ರ ಜೊತೆಗೆ ಬೇಬಿ ಪ್ರಾಣ್ಯ , ಅಚ್ಯುತ್ ಕುಮಾರ್ ಹಾಗೂ ಶೋಭ್ ರಾಜ್ ಪ್ರಮುಖವಾಗಿ ನಿಲ್ಲುತ್ತಾರೆ. ಸಂಚಾರಿ ವಿಜಯ್ , ಮಯೂರಿ ಹಾಗೂ ದುನಿಯಾ ರಶ್ಮಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಇಲ್ಲಿ ಸಂಚಾರಿ ವಿಜಯ್ ಬಗ್ಗೆ ಒಂದಷ್ಟು ಹೇಳಲೇ ಬೇಕು. ವಿಜಯ್ ಅವರಿಗಿಲ್ಲ ನಟನೆಗೆ ಸಾಕಷ್ಟು ಅವಕಾಶವಿದ್ದಿದ್ದರಿಂದ ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚಿತ್ರ ಮುಗಿದ ಮೇಲೂ ಅವರ ಪಾತ್ರ ಕಾಡುತ್ತದೆ. ಪೋಲಿಸ್‍ಸ್ಟೇಶನ್‍ನಲ್ಲಿನ ಫೈಟಿಂಗ್ ಸೀನ್‍ನಲ್ಲಿನ ವಿಜಯ್ ಅವರ ಡೆಡಿಕೇಶನ್ ಮೆಚ್ಚಲೇಬೇಕು. ಇನ್ನು ನಟಿ ಮಯೂರಿ ಪಾತ್ರದ ತಯಾರಿ ಬಗ್ಗೆ ಇನ್ನಷ್ಟು ತಲೆಕೆಡಿಸಿಕೊಂಡಿದ್ದರೆ ಇಲ್ಲಿನ ಪಾತ್ರ ಅವರ ವೃತ್ತಿ ಬದುಕಿನ ಮೈಲಿಗಲ್ಲಾಗುತ್ತಿತ್ತು.
ಈ ಚಿತ್ರ ಹಾರರ್ ಟಚ್ ಇರೋ ಸಿನಿಮಾ ಆಗಿರೊದ್ರಿಂದ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಬಹಳ ಮುಖ್ಯವಾಗುತ್ತೆ. ಈ ವಿಷಯದಲ್ಲಿ ನಾಬೀನ್ ಪೌಲ್ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಪರಮೇಶ್.ಸಿ.ಎಮ್ ಕ್ಯಾಮೆರಾ ವರ್ಕ್ ನೈಟ್‍ಎಫೆಕ್ಟ್‍ನಲ್ಲಿ ಸೂಪರ್.
ಇದೊಂದು ನೈಜ ಘಟನೆಯಾಧರಿತ ಚಿತ್ರ ಎಂದು ಹೇಳಿಕೊಂಡಿರುವ ಚಿತ್ರತಂಡ ಒಂದು ಸೂಕ್ಷ್ಮವಾದ ವಿಚಾರವನ್ನೇ ಎತ್ತಿಕೊಂಡಿದೆ. ಕಂಟೆಂಟ್ ವಿಚಾರದಲ್ಲಿ ಗೆದ್ದಿರೋ ಸಿನ್ಮಾ, ಪ್ರಸೆಂಟೆಶನ್ ವಿಚಾರದಲ್ಲಿ ಇನ್ನೂ ಸ್ವಲ್ಪ ಸುಧಾರಿಸಬೇಕಿತ್ತು. ಖುಷಿ ಸಂಗತಿ ಎಂದರೆ ನಿರ್ದೇಶಕ ರಾಮಚಂದ್ರ ಕಥೆಗೆ ಏನು ಬೇಕೋ ಅದಷ್ಟೇ ಮಾಡಿದ್ದಾರೆ. ‘ಕಮರ್ಶಿಯಲ್’ಗಾಗಿ ಅನಗತ್ಯ ಹಾಸ್ಯ ದೃಶ್ಯಗಳನ್ನು, ಹಾಡುಗಳನ್ನು ತುರುಕದೆ ಒಂದು ನೀಟ್ ಚಿತ್ರ ಮಾಡಿದ್ದಾರೆ. ಒಟ್ಟಿನಲ್ಲಿ ಚಿತ್ರ `ಆಟಕ್ಕೂ ಉಂಟು.. ಲೆಕ್ಕಕ್ಕೂ ಉಂಟು..’.

This Article Has 2 Comments
  1. Pingback: open source automation testing tools for desktop application

  2. Pingback: solar Installation Coral Terrace

Leave a Reply

Your email address will not be published. Required fields are marked *

Translate »
error: Content is protected !!