ಸ್ಟಾರ್ ನಟರ ಸಿನಿಮಾ ಸೇರಿ ನಾಲ್ಕು ಸಿನಿಮಾಗಳು ಇಂದು ಚಂದನವನದಲ್ಲಿ ತೆರೆ ಕಾಣುತ್ತಿವೆ.
ಭೀಮ:
ಸ್ಟಾರ್ ನಟರ ಸಿನಿಮಾಗಳಿಲ್ಲ ಎನ್ನುವಾಗ ‘ದುನಿಯಾ’ ವಿಜಯ್ ನಟನೆಯ ‘ಭೀಮ’ ಸಿನಿಮಾ ತೆರೆ ಕಂಡಿದೆ. ಸೆಟ್ಟೇರಿದ ಎರಡು ವರ್ಷಗಳ ಬಳಿಕ ಸಿನಿಮಾ ತೆರೆಕಾಣುತ್ತಿದೆ.
ಸಲಗ’ ಸಿನಿಮಾ ಮೂಲಕ ನಿರ್ದೇಶಕನಾಗಿ ಮಿಂಚಿದ ‘ದುನಿಯಾ’ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ‘ಭೀಮ’. ರೌಡಿಸಂ, ಮಾದಕ ವಸ್ತು, ಪ್ರೀತಿ ಹೀಗೆ ಹಲವು ವಿಷಯಗಳನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ‘ಭೀಮ’ನಿಗೆ ಜೋಡಿಯಾಗಿ ಅಶ್ವಿನಿ ನಟಿಸಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಕಲ್ಯಾಣಿ ತಾರಾಬಳಗದಲ್ಲಿದ್ದಾರೆ. ಮಾಸ್ತಿ ಸಂಭಾಷಣೆ, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇದು ಎಂಥಾ ಲೋಕವಯ್ಯಾ:
ಸಿತೇಶ್ ಸಿ ಗೋವಿಂದ್ ನಿರ್ದೇಶನದ ಈ ಚಿತ್ರವನ್ನು ಮಲಯಾಳ ನಿರ್ದೇಶಕ ಜಿಯೋ ಬೇಬಿ ಪ್ರಸ್ತುತಪಡಿಸುತ್ತಿದ್ದಾರೆ. ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶಕನಾಗಿ ಸಿತೇಶ್ ಅವರಿಗೆ ಇದು ಮೊದಲ ಸಿನಿಮಾ.
ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ್ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ದೀಪಕ್ ರೈ, ಪ್ರಕಾಶ್ ತುಮ್ಮಿನಾಡ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರ ಕರ್ನಾಟಕ ಮತ್ತು ಕೇರಳ ಗಡಿಯ ಹಳ್ಳಿಗಳಲ್ಲಿ ನಡೆಯುವ ಕಥೆ ಹೊಂದಿದೆ.
ಕಬಂಧ:
ಕುಂಜಾರ ಫಿಲಂಸ್ ಲಾಂಛನದ ಈ ಸಿನಿಮಾವನ್ನು ಸತ್ಯನಾಥ್ ನಿರ್ದೇಶಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಪ್ರಕರಣವೊಂದನ್ನು ಬಳಸಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.
ಸಿನಿಮಾದಲ್ಲಿ ಕಿಶೋರ್, ಪ್ರಸಾದ್ ವಶಿಷ್ಠ, ಪ್ರಿಯಾಂಕ ಮುಖ್ಯಭೂಮಿಕೆಯಲ್ಲಿದ್ದಾರೆ. ಅವಿನಾಶ್, ನಿರ್ದೇಶಕ ಯೋಗರಾಜ್ ಭಟ್, ವಂದನ, ವಚನ, ವಿಶಾಲ್, ನಾಗಾರ್ಜುನ ಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್ ಸಿದ್ದಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಜೀನಿಯಸ್ ಮುತ್ತ:
ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಚಿತ್ರ ‘ಜೀನಿಯಸ್ ಮುತ್ತ’. ಜಿ.ಎಸ್. ಲತಾ ಜೈಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ ‘ಜೀನಿಯಸ್ ಮುತ್ತ’ನಾಗಿ ಶ್ರೇಯಸ್ ಜೈಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್, ಸುಂದರರಾಜ್, ಪನ್ನಗಾಭರಣ ಮುಂತಾದವರು ತಾರಾಬಳಗದಲ್ಲಿದ್ದಾರೆ.
—–
Be the first to comment