ಇಂದು ಮೂರು ಕನ್ನಡ ಚಿತ್ರಗಳು ತೆರೆಗೆ

ಇಂದು ಮೂರು ಕನ್ನಡ ಚಿತ್ರಗಳು ತೆರೆಗೆ ಬರುತ್ತಿದೆ.

ದ ಜಡ್ಜ್‌ಮೆಂಟ್‌:

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್‌ಮೆಂಟ್‌’ ಇಂದು ತೆರೆಗೆ ಬರುತ್ತಿದೆ. ಜಿ9 ಕಮ್ಯೂನಿಕೇಷನ್‌ ಮೀಡಿಯಾ ಆಯಂಡ್‌ ಎಂಟರ್‌ಟೈನ್ಮೆಂಟ್‌ ಲಾಂಛನದಲ್ಲಿ ಚಿತ್ರ ನಿರ್ಮಾಣಗೊಂಡಿದ್ದು, ಗುರುರಾಜ ಕುಲಕರ್ಣಿ ಚಿತ್ರಕ್ಕೆ ಆಕ್ಷನ್‌-ಕಟ್‌ ಹೇಳಿದ್ದಾರೆ.

ನ್ಯಾಯವಾದಿಯೊಬ್ಬ ನ್ಯಾಯಕ್ಕೋಸ್ಕರ, ನ್ಯಾಯಾಲಯದ ಪರಿಧಿಯಲ್ಲೇ ಹೋರಾಡುತ್ತಾನೆ. ಇರುವ ವ್ಯವಸ್ಥೆಯನ್ನು ದೂರದೇ, ಇದ್ದ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಕಥೆ. ರವಿಚಂದ್ರನ್‌ ನ್ಯಾಯವಾದಿಯಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಮೇಘನಾ ಗಾಂವ್ಕರ್‌ ರವಿಚಂದ್ರನ್‌ಗೆ ಜೋಡಿಯಾಗಿದ್ದಾರೆ. ದಿಗಂತ್, ಧನ್ಯಾ ರಾಮ್‌ಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ.ಎಸ್‌.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪಿ.ಕೆ.ಎಚ್‌. ದಾಸ್‌ ಛಾಯಾಚಿತ್ರಗ್ರಹಣ, ಕೆಂಪರಾಜ್ ಸಂಕಲನ ಚಿತ್ರಕ್ಕಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಮೂರನೇ ಕೃಷ್ಣಪ್ಪ:

ರಂಗಾಯಣ ರಘು ಹಾಗೂ ಸಂಪತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮೂರನೇ ಕೃಷ್ಣಪ್ಪ’ ಚಿತ್ರ  ಇಂದು ತೆರೆಕಾಣುತ್ತಿದೆ. ನವೀನ್‌ ನಾರಾಯಣಘಟ್ಟ ನಿರ್ದೇಶನದ ಈ ಚಿತ್ರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನ ನಾರಾಯಣಪುರ ಎಂಬಲ್ಲಿ ನಡೆಯುವ ಕಥೆಯನ್ನು ಹೊಂದಿದೆ.

ಊರಲ್ಲಿ ‘ಕೃಷ್ಣಪ್ಪ’ ಹೆಸರಿನ ಮೂವರಿದ್ದು, ಅದರಲ್ಲಿ ನಟ ಸಂಪತ್‌ ‘ಮೂರನೇ ಕೃಷ್ಣಪ್ಪ’ನಿಗೆ ಬಣ್ಣಹಚ್ಚಿದ್ದಾರೆ. ‘ವೀರಣ್ಣ’ನಾಗಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿ ನಟಿಸಿದ್ದು, ಸಂತೋಷ್‌, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ.

ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ.

ಎವಿಡೆನ್ಸ್ :

ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್, ತ್ರಿಕೋನ ಪ್ರೇಮಕಥಾಹಂದರ ಒಳಗೊಂಡ ಎವಿಡೆನ್ಸ್ ಇಂದು ತೆರೆಗೆ ಬರುತ್ತಿರುವ ಮತ್ತೊಂದು ಚಿತ್ರ. ನಟ, ನಿರ್ದೇಶಕ ಉಪೇಂದ್ರ ಅವರ ಜೊತೆ ‘ಶ್‌..’ ಚಿತ್ರದಿಂದ ‘ಉಪೇಂದ್ರ-2’ ವರೆಗೂ ಕೆಲಸ ಮಾಡಿದ ಪ್ರವೀಣ್ ಸಿ. ಪಿ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಶ್ರೀಧೃತಿ ಪ್ರೊಡಕ್ಷನ್ ನಿರ್ಮಾಣದ ಚಿತ್ರದಲ್ಲಿ ನಾಯಕನಾಗಿ ‘ಜೋಶ್’ ಖ್ಯಾತಿಯ ರೋಬೊ ಗಣೇಶನ್ ಅವರು ನಟಿಸಿದ್ದು, ನಟಿ ಮಾನಸ ಜೋಶಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ, ರವಿ ಸುವರ್ಣ ಛಾಯಾಗ್ರಹಣ  ಚಿತ್ರಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!