‘ಮಾತು’ ಬೆಳ್ಳಿ, ಮೌನಂ..!?

‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ಇದನ್ನೇ ಬೇಸ್ ಆಗಿಟ್ಟುಕೊಂಡು, ಮೌನ ಮಾತಿಗಿಂತ ಹೇಗೆ ಪವರ್‍ಫುಲ್ ಎಂಬುದನ್ನು ನಿರೂಪಿಸುವ ಪ್ರಯತ್ನದಲ್ಲಿದ್ದಾರೆ ನವ ನಿರ್ದೇಶಕ ರಾಜ್ ಪಂಡಿತ್. ‘ಮೌನಂ’ ಇದೊಂದು ಸೈಕಾಲಾಜಿಕಲ್ ಸಿನಿಮಾ. ಸಮಾಜದಲ್ಲಿ ಒಳ್ಳೆಯದ್ದು ಇರುತ್ತೆ, ಕೆಟ್ಟದ್ದು ಇರುತ್ತೆ. ಪೋಷಕರಾದವರು ಮಕ್ಕಳಿಗೆ ಎರಡ ಬಗ್ಗೆ ಅರಿವು ಮೂಡಿಸಬೇಕು. ಅದರ ಬಗ್ಗೆ ಮಾಹಿತಿಯೇ ಇಲ್ಲದಿದ್ದಾಗ ಮಕ್ಕಳಲ್ಲಿ ಕೆಟ್ಟ ಕುತೂಹಲ ಮೂಡಿ ಅದನ್ನು ಚಟವಾಗಿ ಒಗ್ಗೂಡಿಸಿಕೊಳ್ಳಬಹುದು. ಹೀಗಾಗಿ ಪೋಷಕರು ಮತ್ತು ಮಕ್ಕಳ ನಡುವಿನ ಎಳೆಯ ಕಥೆಯನ್ನು ಹೇಳ ಹೊರಟಿದ್ದಾರೆ. ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ರಾಜ್, 32 ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ, ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರವೊಂದನ್ನು ಮಾಡಿರುವ ಖುಷಿಯಲ್ಲಿದ್ದಾರೆ ರಾಜ್.

ಇನ್ನು ನಿರ್ಮಾಪಕ ಅವರ ಬಗ್ಗೆ ಹೇಳುವುದಾದರೆ, ನಿರ್ಮಾಪಕ ಶ್ರೀಹರಿಯವರಿಗೂ ಇದು ಚೊಚ್ಚಲ ಚಿತ್ರ. ರಾಜ್ ಅವರು ಡೈರೆಕ್ಟ್ ‘ದೇವರಿಗೆ ಪಾಠ’ ಎಂಬ ಶಾರ್ಟ್ ಮೂವಿಯನ್ನು ನೋಡಿ ಶ್ರೀಹರಿಯವರು ಇಂಪ್ರೆಸ್ ಆಗಿ ‘ಮೌನಂ’ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಮೊದಲ ಚಿತ್ರವಾದರು ಶ್ರೀಹರಿಯವರು ನಿರ್ದೇಶಕರು ಕೇಳಿದ ಆರ್ಟಿಸ್ಟ್ ಮತ್ತು ಟೆಕ್ನಿಶಿಯನ್ಸ್ ಅನ್ನು ಒದಗಿಸಿ ಒಂದು ಪರಿಪೂರ್ಣ ಚಿತ್ರದ ತಯಾರಿಕೆಗೆ ಟೀಂ ರೆಡಿ ಮಾಡಿ ಕೊಟ್ಟರು.

ಇನ್ನು ಮೌನಂ ಸಿನಿಮಾದಲ್ಲಿ ಅವಿನಾಶ್ 6 ಶೇಡ್‍ನಲ್ಲಿ ಮಾಡಿದ್ದು, ಈ ಪಾತ್ರ ಅವಿನಾಶ್ ಅವರಿಗೆ ಖುಷಿ ಕೊಟ್ಟಿದೆಯಂತೆ. ಮಯೂರಿ ಎರಡು ಶೇಡ್‍ನಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಹೋಮ್ಲಿ ಹಾಗೂ ಆಕ್ಷನ್ ಲುಕ್‍ನಲ್ಲಿ ಕೃಷ್ಣಲೀಲಾ ಸುಂದರಿ ಮಿಂಚಿದ್ದಾರೆ. ಅವಿನಾಶ್ ಮಗನ ಪಾತ್ರದಾರಿಯಾಗಿ ಬಾಲಾಜಿ ಅಭಿನಯಿಸಿದ್ದಾರೆ. ಉಳಿದಂತೆ ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ಕಾಮಿಡಿ ಕಿಲಾಡಿ ನಯನ, ಸಿಂಚನ, ಮಂಜುಳಾ ರೆಡ್ಡಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ಮೌನಂಗೆ ನಿರ್ದೇಶನದ ಜೊತೆಗೆ ರಾಜ್ ಪಂಡಿತ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಶಂಕರ್ ಛಾಯಾಗ್ರಹಣವಿದೆ. ಆರವ್ ರಿಶಿಕ್ ಸಂಗೀತ ಸಂಯೋಜಿಸಿದ್ದಾರೆ. ಗುರುಮೂರ್ತಿ ಹೆಗಡೆ, ಅನುರಂಜನ್ ಹೆಚ್.ಆರ್ ಸಂಕಲನ ಮಾಡಿದ್ದು, ಕೌರವ್ ವೆಂಕಟೇಶ್, ಶಿವು ಸಾಹಸ ನೀಡಿದ್ದಾರೆ. ಅದ್ಭುತ ಹಾಡುಗಳಿಗೆ ನಾಗಿ ಡಾನ್ಸ್ ಹೇಳಿಕೊಟ್ಟಿದ್ದಾರೆ. ಉಳಿದಂತೆ ವಿಜಯ್ ಪ್ರಕಾಶ್, ಅನಿರುದ್ಧ್ ಶಾಸ್ತ್ರಿ, ಅನುರಾಧ ಭಟ್ ಧ್ವನಿಯಲ್ಲಿ ಹಾಡುಗಳು ಮೂಡಿ ಬಂದಿವೆ. ಈಗಾಗಲೇ ಟೀಸರ್ ಮೂಲಕ ಮೌನ ಮುರಿದಿರುವ ಮೌನಂ ಚಿತ್ರತಂಡ ಸದ್ಯದಲ್ಲೇ ಟ್ರೈಲರ್ ರಿಲೀಸ್ ಮಾಡಿ ತೆರೆಗೆ ಬರುವ ಪ್ಲಾನ್ ಮಾಡಲಿದೆ.

This Article Has 2 Comments
  1. Pingback: CICD

  2. Pingback: sex differences in jealousy evolution physiology and psychology

Leave a Reply

Your email address will not be published. Required fields are marked *

Translate »
error: Content is protected !!