ಮೌನಂ ಸಮ್ಮತಿ ಲಕ್ಷಣಂ

ಸಂಸ್ಕ್ರತ ಪದ ‘ಮೌನಂ’ ಎಲ್ಲ ಭಾಷೆಗಳಿಗೂ ಹೊಂದಿಕೊಳ್ಳುತ್ತದೆ. ಅದಕ್ಕಾಗಿ ಚಂದನವನದಲ್ಲಿ ಇದೇ ಹೆಸರಿನೊಂದಿಗೆ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ.ನಿಶ್ಯಬ್ದಕ್ಕೂ ಶಬ್ದವಿದೆ ಎಂಬ ಅಡಿಬರಹ ಹಾಗೂ ಭಾರತೀಯ ಚಿತ್ರರಂಗದ ವಿನೂತನ ಸಿನಿಮಾವೆಂದು ಹೇಳಿಕೊಂಡಿದೆ.ಚಿತ್ರದ ಕುರಿತು ಹೇಳುವುದಾದರೆ ನಾವುಗಳು ಬೇರೆಯವರನ್ನು ಶತ್ರುಗಳು ಅಂತ ನೋಡುತ್ತೇವೆ. ಆದರೆ ನಮ್ಮೊಳಗೆ ಇದರ ಗುಣ ಇರುವುದು ತಿಳಿದಿರುವುದಿಲ್ಲ. ಒಳ್ಳೇದು ಮಾಡಿದರೂ ಕಷ್ಟದಲ್ಲಿ ಸಿಲುಕುತ್ತೇವೆ. ಬುದ್ದಿ, ಜೀವನ ಬೇರೆ ಬೇರೆಯಾಗಿರುತ್ತದೆ. ಅತಿ ಬುದ್ದಿವಂತಿಕೆ ತೋರಿಸಿದರೆ ಏನಾದರೂ ಅವಘಡಗಳು ಸಂಭವಿಸುತ್ತದೆ.ಎಲ್ಲರೂತಮ್ಮ ಮಕ್ಕಳು ಒಳ್ಳೆಯ ದಾರಿಗೆ ಹೋಗಬೇಕೆಂದು ಹಿತವಚನಕೊಡುತ್ತಾರೆ.ಇದರಲ್ಲಿ ತಂದೆಯಾದವನು ಮಗನಿಗೆ ಮೊದಲು ಕೆಟ್ಟದಾರಿಗೆ ಕರೆದುಕೊಂಡು ಹೋಗಿ, ಇಲ್ಲಿಗೆ ಹೋದರೆ ಈ ರೀತಿ ಆಗುತ್ತದೆ.ಅದಕ್ಕಾಗಿ ಸನ್ಮಾರ್ಗದಲ್ಲಿ ಹೋಗಲು ಅರಿವು ಮೂಡಿಸುತ್ತಾರೆ.ಇಂತಹ ಸನ್ನಿವೇಶಗಳು ಬರಲಿದ್ದು, ಪ್ರತಿಯೊಂದು ದೃಶ್ಯಕ್ಕೂ ಅರ್ಥಪೂರ್ಣ ಸಂದೇಶ ಇರುವುದು ವಿಶೇಷ.

‘ಅಮೃತವರ್ಷಿಣಿ’ ಧಾರವಾಹಿ ಖ್ಯಾತಿಯ ಬಾಲಾಜಿಶರ್ಮ ಹಿರಿತೆರೆಗೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ.ಹಾಸ್ಯ, ಭಾವನೆಗಳು, ರೋಮಾನ್ಸ್ ಹೀಗೆ ನಾಲ್ಕು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.ಒಂದು ಸನ್ನಿವೇಶದಲ್ಲಿ 90ಕೆಜಿಯಿಂದ 78 ಕೆಜೆತೂಕಇಳಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಾಲೇಜು ಹುಡುಗಿ, ಬಿಂದಾಸ್ ಆಗಿರುತ್ತಾಳೆ. ಬದುಕಿನಲ್ಲಿಘಟನೆಯೊಂದು ನಡೆದಾಗಅದುಎಲ್ಲಿಗೋತೆಗೆದುಕೊಂಡು ಹೋಗುತ್ತದೆ. ಪ್ರೀತಿಗೆ ಸಂರ್ಕೀಣ ಅರ್ಥಗಳು ಇರುತ್ತದೆ ಎಂದು ಹೇಳುವ ನಾಯಕಿ ಮಯೂರಿ ಎರಡು ಶೇಡ್‍ಗಳಲ್ಲಿ ನಟಿಸಿದ್ದಾರೆ.ವೃತ್ತಿ ಜೀವನದಲ್ಲಿ 800 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್‍ ಇದೆಲ್ಲಾಕ್ಕಿಂತ ಭಿನ್ನವಾಗಿ ಕುಂಚ ಕಲಾವಿದರಾಗಿ, ಒಮ್ಮೆ ಮಗನೊಂದಿಗೆ ಗುಂಡು ಹಾಕುತ್ತಾರೆ, ಸೈಕೆಲ್‍ನ್ನು ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ.ಗನ್ ಹಿಡಿಯುತ್ತಾರೆ.ಹೀಗೆ ನಾಲ್ಕಾ ರೀತಿಯಲ್ಲಿ ನಟಿಸಿರುವುದು ಖುಷಿ ತಂದಿದೆಯಂತೆ.ಎಷ್ಟರಮಟ್ಟಿಗೆಎಂದರೆ ಮನೆಗೆ ಹೋದರೂ ಪಾತ್ರವು ಕಾಡಿದೆ.ಉಳಿದಂತೆ ಗುಣವಂತ ಮಂಜು, ದುರಳನಾಗಿ ಕನ್ನಡಿಗ ಬಲರಾಂ, ರಿತೇಶ್, ನಯನ, ಹನುಮಂತೇಗೌಡ, ಜಯಲಕ್ಷೀ ಮುಂತಾದವರ ನಟನೆ ಇದೆ.

‘ದೇವರಿಗೆ ಪಾಠ’ ಎನ್ನುವ ಕಿರುಚಿತ್ರ ನಿರ್ದೇಶನ ಮಾಡಿರುವ ಬೀದರ್ ಮೂಲದರಾಜ್‍ ಪಂಡಿತ್‍ ರಚನೆ, ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‍ಕಟ್ ಹೇಳಿರುವುದು ಹೊಸ ಅನುಭವ. ಆಕಾಶ್.ಎಸ್ ಸಾಹಿತ್ಯದ ಮೂರು ಹಾಡುಗಳಿಗೆ ಆರವ್‍ರುಷಿಕ್‍ರಾಗ ಒದಗಿಸಿದ್ದಾರೆ. ಛಾಯಾಗ್ರಹಣ ಶಂಕರ್, ಸಂಕಲನ ಗುರುಮೂತಿಹೆಗಡೆ-ಹೆಚ್.ಆರ್.ಅನುರಂಜನ್, ಕಲೆ ಇಸ್ಮೈಲ್, ಸಾಹಸ ಅಲ್ಟಿಮೇಟ್‍ಶಿವು-ಕೌರವ ವೆಂಕಟೇಶ್, ನೃತ್ಯ ಸ್ಟಾರ್ ನಾಗಿ ನಿರ್ವಹಿಸಿದ್ದಾರೆ.ಬೆಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಹನ್ನೊಂದು ವರ್ಷಗಳ ಹಿಂದೆ ಸಿನಿಮಾಕ್ಕೆ ಪಾಲುದಾರರಾಗಿದ್ದಆಂಧ್ರದಕನ್ನಡಿಗ ಶ್ರೀಹರಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವಚಿತ್ರವನ್ನು ಫೆಬ್ರವರಿದಲ್ಲಿ ಬಿಡುಗಡೆ ಮಾಡಲುತಂಡವು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

This Article Has 1 Comment
  1. Pingback: sex dolls

Leave a Reply

Your email address will not be published. Required fields are marked *

Translate »
error: Content is protected !!