ಮಾತುಗಾರ್ತಿ ಮಯೂರಿ ಮೌನವಾಗಿದ್ದು ಯಾವಾಗ ಎನ್ನುವ ಸಂದೇಹ ನಿಮಗೆ ಮೂಡಿದರೆ ಅದು ಸಹಜ. ಆದರೆ ಮಯೂರಿ ಮೌನಂಗೆ ಮೊರೆ ಹೋಗಿರುವುದು ಸಿನಿಮಾದಲ್ಲಿ. ಹೌದು, ಭರದಿಂದ ತೆರೆಗೆ ಸಿದ್ಧವಾಗುತ್ತಿರುವ ಸಿನಿಮಾ ಮೌನಂನಲ್ಲಿ ಮಯೂರಿ ತಮ್ಮದೇ ಹೆಸರಿನ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅದೇ ಪ್ರತಿ ವರ್ಷದಂತೆ ಈ ವರ್ಷವೂ ಒಂದು ವರ್ಷ ಹೆಚ್ಚಾಯಿತು. ನಾನು ದೇವರಲ್ಲಿ ತುಂಬ ನಂಬಿಕೆಯಿದೆ. ಹಾಗಾಗಿ ನನಗೂ ಸೇರಿದಂತೆ ಎಲ್ಲರಿಗೂ ಒಳಿತಾಗಲೆಂದು ಬೇಡುತ್ತೇನೆ. ಅದರಲ್ಲೂ ಈಗಷ್ಟೇ ಶಸ್ತ್ರಚಿಕಿತ್ಸೆ ಮುಗಿಸಿ ವಿಶ್ರಾಂತಿ ಪಡೆಯುತ್ತಿರುವ ಡಾ. ಶಿವರಾಜ್ ಕುಮಾರ್ ಅವರಿಗೆ ಅಡ್ವಾನ್ಸ್ ಆಗಿ ಜನ್ಮದಿನದ ಶುಭಾಶಯ ಕೋರುತ್ತೇನೆ.
ನಿಮ್ಮ ಹೊಸ ಚಿತ್ರ ಮೌನಂನಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ
ಮೌನಂ ಚಿತ್ರದಲ್ಲಿ ನನ್ನದು ಅಮೇಜಿಂಗ್ ರೋಲ್. ಅದರಲ್ಲಿ ನಾನು ಮಯೂರಿ ಎಂಬ ಕಾಲೇಜ್ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ಪಕ್ಕ ಎಂಟರ್ಟೈನ್ಮೆಂಟ್ ಇರುವ ಚಿತ್ರ. ನಾನು ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ನನ್ನ ಪಾಲಿಗೆ ಇದು ಹೊಸತನದ ಪಾತ್ರವೇ ಆಗಲಿದೆ. ಒಂದು ಕಡೆ ಟಾಮ್ ಬಾಯ್ ಸ್ಟೈಲ್ ಇರುತ್ತದೆ. ಬೈಕ್ ಓಡಿಸುವ, ಸಿಗರೇಟ್ ಸೇದುವ ಅಭ್ಯಾಸ ಹೊಂದಿರುವವಳು. ಆದರೆ ಆಕೆ ಲವ್ವಲ್ಲಿ ಬಿದ್ದ ಮೇಲೆ ಸೌಜನ್ಯತೆಯನ್ನು ಹೇಗೆ ಮೈಗೂಡಿಸಿಕೊಳ್ಳುತ್ತಾಳೆ ಎನ್ನುವುದನ್ನು ಚೆನ್ನಾಗಿ ತೋರಿಸಲಾಗಿದೆ.
ಮೌನಂ ಚಿತ್ರದಲ್ಲಿ ನೀವು ಕಂಡ ವಿಶೇಷತೆಗಳೇನು?
ನಾಯಕಿ ಯಾಕೆ ಎರಡು ಶೇಡ್ ಮೈಗೂಡಿಸಿಕೊಳ್ಳುತ್ತಾಳೆ ಎನ್ನುವುದೇ ನನ್ನ ಪಾಲಿನ ಪ್ರಮುಖ ಅಂಶವಾಗಿರುತ್ತದೆ. ನಾಯಕನ ಹೆಸರು ರಾಜು. ಕಲಿತು ಹೆಸರು ಮಾಡುವ, ರ್ಯಾಂಕ್ ಪಡೆಯುವ, ಪ್ರಶಸ್ತಿ ಪಡೆಯುವ ಗುರಿ ಹೊಂದಿರುತ್ತಾನೆ. ಸಿನಿಮಾದ ಚಿತ್ರೀಕರಣ ಮುಗಿದಿದೆ. ಡಬ್ಬಿಂಗ್ ಕೂಡ ಆಯಿತು.
ರಿರೆಕಾರ್ಡಿಂಗ್ , ಡಿಐ ಕೆಲಸ ನಡೆಯುತ್ತಿದೆ. ಇನ್ನೇನು ಎಲ್ಲ ವಿಶೇಷತೆಗಳನ್ನು ಪ್ರೇಕ್ಷಕರು ಖುದ್ದು ಚಿತ್ರಮಂದಿರಗಳಲ್ಲೇ ನೋಡಬಹುದು…
ಚಿತ್ರದ ಹಾಡುಗಳ ಬಗ್ಗೆ ಹೇಳಿ
ಮೌನಂ ಸಿನಿಮಾದಲ್ಲಿ ಒಳ್ಳೆಯ ಹಾಡುಗಳಿವೆ. ಮಲೆನಾಡಿನ ಕಡೆಯಲ್ಲಿ ಚಿತ್ರೀಕರಣ ನಡೆಸಿದಂಥ ಒಂದೊಳ್ಳೆಯ ಪ್ರೇಮಗೀತೆ ಇದೆ. ಮಾಂಟಾಜ್ ಹಾಡು ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಸಿನಿಮಾ ನೋಡೋಕೆ ಬಂದವರು ಹೊಸತನ ಕಂಡುಕೊಂಡ ಖುಷಿಯಿಂದಲೇ ಮರಳುವ ಭರವಸೆ ಇದೆ.
ಶೂಟಿಂಗ್ ನಲ್ಲಿ ನಡೆದಂಥ ಒಂದು ಮರೆಯಲಾಗದ ಘಟನೆ ಏನಾದರೂ ಇದ್ದರೆ ಆ ಬಗ್ಗೆ ಹಂಚಿಕೊಳ್ಳಿ..
ಈ ಚಿತ್ರದಲ್ಲಿ ಒಂದು ಘಟನೆ ಬಗ್ಗೆ ಹೇಳುವುದಕ್ಕಿಂತ ಪೂರ್ತಿ ಚಿತ್ರೀಕರಣವೇ ಮರೆಯಲಾಗದಂಥದ್ದು. ಸೆಟ್ ಡಿಪಾರ್ಟ್ಮೆಂಟ್ ಜತೆಗಿನ ಸಂಬಂಧ ತುಂಬ ಚೆನ್ನಾಗಿತ್ತು. ಲೈಟ್ ಬಾಯ್ಸ್, ಕ್ಯಾಮೆರಾ ಡಿಪಾರ್ಟ್ಮೆಂಟ್ ನವರು ತುಂಬ ಹೊಂದಿಕೊಂಡಿದ್ದರು. ಎಲ್ಲ ಸೆಟ್ ನಲ್ಲಿಯೂ ಹೊಂದಾಣಿಕೆ ಇದ್ದೇ ಇರುತ್ತದೆ. ಆದರೆ ಈ ಚಿತ್ರತಂಡದಲ್ಲಿ ಅದರ ಪ್ರಮಾಣ ಒಂದು ಮಟ್ಟಕ್ಕೆ ಹೆಚ್ಚಾಗಿಯೇ ಇತ್ತು ಎನ್ನಬಹುದು. ಕ್ಯಾರವಾನಲ್ಲಿ ಇದ್ದಿದ್ದೇ ಕಡಿಮೆ. ತುಂಬ ಈಸಿಯಾಗಿ ಎಂಜಾಯ್ ಮಾಡಿಕೊಂಡು ಮಾಡಿದಂಥ ಚಿತ್ರ ಇದು ಎನ್ನಬಹುದು.
ಮೌನಂ ಸಿನಿಮಾದ ಪಾತ್ರ ನಿಮಗೆ ಹೊಸ ಇಮೇಜ್ ನೀಡುವ ನಿರೀಕ್ಷೆ ಇದೆಯೇ?
ಎಲ್ಲ ಚಿತ್ರಗಳು ಕೂಡ ಕಲಾವಿದರಿಗೆ ಅವರ ಹೊಸ ಮುಖ ತೋರಿಸುವಂತೆ ಇರುತ್ತದೆ. ಒಂದೇ ಒಂದು ದೃಶ್ಯ ಕೂಡ ಕಲಾವಿದನ ಇಮೇಜ್ ಅಥವಾ ಸ್ಟಾರ್ ವ್ಯಾಲ್ಯು ಅನ್ನು ಬದಲಾಯಿಸಬಹುದು. ಹಾಗಾಗಿ ಈ ಸಿನಿಮಾ ಕೂಡ ನನಗೆ ಹೊಸ ಹೆಸರು ತಂದುಕೊಡಬಹುದು ಎನ್ನುವ ನಿರೀಕ್ಷೆ ಇರಿಸಿಕೊಂಡಿದ್ದೇನೆ.
ಮೌನಂ ಬಗ್ಗೆ ಹೇಳುವಾಗ ಒಬ್ಬರ ಹೆಸರನ್ನು ಹೇಳಲೇಬೇಕು ಎಂದು ಇದ್ದಲ್ಲಿ ಅದು ಯಾರು?
ಖಂಡಿತವಾಗಿ ನಾನು ನಿರ್ದೇಶಕರ ಬಗ್ಗೆ ಹೇಳಲೇಬೇಕು. ಅವರಿಗೆ ಚಿತ್ರದ ಬಗ್ಗೆ ನಿರೀಕ್ಷೆಗಳಿವೆ. ಜನ ತಮ್ಮನ್ನು ‘ಮೌನಂ ಪಂಡಿತ್’ ಎಂದೇ ಗುರುತಿಸಬೇಕು ಎಂಬ ಆಕಾಂಕ್ಷೆ ಅವರಲ್ಲಿದೆ. ಅದಕ್ಕಾಗಿ ಹಾರ್ಡ್ ವರ್ಕ್ ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಇದು ಯಾರಿಗೂ ಊಹಿಸಲು ಸಾಧ್ಯವಾಗದಂಥ ಲವ್ ಸ್ಟೋರಿ ಎನ್ನುವುದಂತೂ ನಿಜ. ಅದೇ ಕಾರಣದಿಂದಲೇ ನಾನು ಪಾತ್ರವನ್ನು ಒಪ್ಪಿಕೊಂಡಿದ್ದೇನೆ. ಆ್ಯಂಡ್ ಅಫ್ ಕೋರ್ಸ್ ನಿರ್ಮಾಪಕರ ಸಹಕಾರವನ್ನು ಕೂಡ ನೆನಪಿಸಿಕೊಳ್ಳಲೇಬೇಕು. ಚಿತ್ರದಲ್ಲಿ ಉತ್ತಮ ಕಲಾವಿದರ ಸಂಗಮವಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಕತೆಯೇ ಚಿತ್ರದ ಮಹಾರಾಜ ಎನ್ನಬಹುದು.
XM
Pingback: Casino
Pingback: 3similar