ಚಿತ್ರ: ಮೂರನೇ ಕೃಷ್ಣಪ್ಪ
ನಿರ್ದೇಶನ : ನವೀನ್ ನಾರಾಯಣ ಘಟ್ಟ
ತಾರಾಗಣ : ರಂಗಾಯಣ ರಘು, ಸಂಪತ್ ಮೈತ್ರೇಯ, ಆರೋಹಿ ನಾರಾಯಣ, ಶ್ರೀಪ್ರಿಯಾ, ತುಕಾಲಿ ಸಂತೋಷ್, ಉಗ್ರಂ ಮಂಜು ಇತರರು
ರೇಟಿಂಗ್: 4/5
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನ ನಾರಾಯಣಪುರ ಎಂಬಲ್ಲಿ ನಡೆಯುವ ಕಥೆಯನ್ನು ಈ ವಾರ ಬಿಡುಗಡೆ ಆಗಿರುವ ಮೂರನೇ ಕೃಷ್ಣಪ್ಪ ಚಿತ್ರ ಹೊಂದಿದೆ. ಚಿತ್ರ ಸಾಮಾಜಿಕ ಸನ್ನಿವೇಶದ ಜೊತೆಗೆ ರಾಜಕೀಯ ಕಥೆಯನ್ನು ಹೇಳುತ್ತದೆ.
ಚಿತ್ರದಲ್ಲಿ ಆನೇಕಲ್ ಕನ್ನಡ ಸ್ಲ್ಯಾಂಗ್ ನಲ್ಲಿ ಮಾತನಾಡುವ ಪಾತ್ರಗಳು ನಮ್ಮ ನಡುವೆ ಇರುವ ಹಳ್ಳಿಯ ಪಾತ್ರಗಳನ್ನು ತೆರೆದಿಟ್ಟಂತೆ ಭಾಸವಾಗುತ್ತದೆ. ಪಾತ್ರಗಳ ಪಂಚ್ ಡೈಲಾಗ್ ಗಳು ಪ್ರೇಕ್ಷಕರಿಗೆ ಮಸ್ತ್ ಮಜಾ ನೀಡುತ್ತವೆ.
ನಾರಾಯಣಪುರದಲ್ಲಿ ಒಟ್ಟು ಮೂವರು ಕೃಷ್ಣಪ್ಪನವರು ಇದ್ದಾರೆ. ಅವರ ಪೈಕಿ ನಟ ಸಂಪತ್ ಅವರು ಮೂರನೇ ಕೃಷ್ಣಪ್ಪನಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ರಂಗಾಯಣ ರಘು ಅವರು ವೀರಣ್ಣನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಂಗಾಯಣ ರಘು ಹಾಗೂ ಸಂಪತ್ ಮೈತ್ರೇಯ ಅವರ ಅಭಿನಯ ಚಿತ್ರದ ಹೈಲೈಟ್ಸ್ ಆಗಿದೆ. ನಾಯಕಿಯಾಗಿ ನಟಿಸಿರುವ ಶ್ರೀಪ್ರಿಯಾ ಓಕೆ ಅನಿಸುತ್ತಾರೆ.
ಚಿತ್ರದಲ್ಲಿ ಹಾಸ್ಯ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ನೈಜ ಅನಿಸಿರುವ ಹಾಸ್ಯ ಸನ್ನಿವೇಶಗಳು, ಆನೇಕಲ್ ಭಾಗದ ಕನ್ನಡ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ.
ಚಿತ್ರಮಂದಿರದಲ್ಲಿ ಒಂದಷ್ಟು ಹೊತ್ತು ಖುಷಿಯಿಂದ ಸಮಯ ಕಳೆಯಬೇಕು ಎನ್ನುವವರಿಗೆ ಈ ಚಿತ್ರ ಇಷ್ಟ ಆಗಬಹುದು.
____ 

Be the first to comment