ಮುಂದುವರೆದ ಅಧ್ಯಾಯ’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣ

ಕಣಜ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಆದಿತ್ಯ ಅವರು ನಾಯಕರಾಗಿ ನಟಿಸುತ್ತಿರುವ `ಮುಂದುವರೆದ ಅಧ್ಯಾಯ` ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವೆ ದಿನಗಳ ಚಿತ್ರೀಕರಣ ಬಾಕಿಯಿದೆ. ಬೆಂಗಳೂರು, ದೇವರಾಯನ ದುರ್ಗ, ಮಂಡ್ಯ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸುತ್ತಿದ್ದಾರೆ. ಜಾನಿ – ನಿತಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ ಬರೆದಿದ್ದಾರೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಆದಿತ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಭಾಸ್ಕರ್, ವಿನಯ್ ಕೃಷ್ಣಸ್ವಾಮಿ, ಆಶಿಕಾ ಗೌಡ, ವಿನೋದ್, ಚಿರನ್, ಸಂದೀಪ್, ಚಂದನ ಗೌಡ, ಅಜಯ್ ರಾಜ್, ಶೋಭನ್, ರಾಮರಾವ್, ರಾಜೇಂದ್ರ ಮುಂತಾದವರಿದ್ದಾರೆ.

This Article Has 2 Comments
  1. Pingback: Login Area

  2. Pingback: คาสิโน

Leave a Reply

Your email address will not be published. Required fields are marked *

Translate »
error: Content is protected !!