ಮೂಕಜೀವ

Mookajeeva Movie Review: ವಿಕಲ ಚೇತನನ ‘ಮೂಕಜೀವ’

ಚಿತ್ರ: ಮೂಕಜೀವ
ನಿರ್ದೇಶನ: ಶ್ರೀನಾಥ್ ವಸಿಷ್ಠ
ತಾರಾಗಣ: ಕಾರ್ತಿಕ್ ಮಹೇಶ್, ಶ್ರೀಹರ್ಷ, ಅಪೂರ್ವ ಶ್ರೀ, ಮೇಘಶ್ರೀ, ರಮೇಶ್ ಪಂಡಿತ್ ಇತರರು
ರೇಟಿಂಗ್: 3.5/5

ವಿಕಲ ಚೇತನನಿಗೆ ಸಾಧನೆಗೆ ಅಂಗ ವೈಕಲ್ಯ ಅಡ್ಡಿಯಾಗಲಾರದು. ಇಂಥ ವ್ಯಕ್ತಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವ ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಹೊತ್ತ ಚಿತ್ರ ಈ ವಾರ ತೆರೆಗೆ ಬಂದಿರುವ ಮೂಕಜೀವ.

ಇದು ಜೆ ಎಂ ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಚಿತ್ರ. ಚಿತ್ರದಲ್ಲಿ ಹಳ್ಳಿಯ ಕಥೆ ಇದೆ. ಬಡ ಕುಟುಂಬದ ವಿಶೇಷ ಚೇತನ ವ್ಯಕ್ತಿಯ ಚಿತ್ರಣ ಸಿನಿಮಾದಲ್ಲಿದೆ.

ತಾಯಿ, ಮಗ, ಪ್ರೀತಿಸಿದವನ ಹಿಂದೆ ಓಡಿ ಹೋಗುವ ಮಗಳು, ಊರಿನ ಗೌಡ, ಊರಿನ ಒಂದಷ್ಟು ಸಮಸ್ಯೆಗಳು ಚಿತ್ರದ ಕಥೆಯಲ್ಲಿವೆ. ಗಂಡಿನ ಆಸರೆ ಇಲ್ಲದೆ ಇಬ್ಬರು ಮಕ್ಕಳನ್ನು ಸಾಕುವ ಮಹಿಳೆ ಊರು ತೊರೆಯಬೇಕಾದಾಗ ಏನಾಗುತ್ತದೆ? ಊರಿನಿಂದ ಓಡಿಹೋದ ಮಗಳು ಏನಾಗುತ್ತಾಳೆ? ವಿಕಲಚೇತನ ಮಗನ ಕಥೆ ಏನಾಗುತ್ತದೆ ಎನ್ನುವುದನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.

ನಾಯಕನ ಪಾತ್ರದಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್, ನಾಯಕಿಯಾಗಿ ಮೇಘಶ್ರೀ, ತಾಯಿಯ ಪಾತ್ರದಲ್ಲಿ ಅಪೂರ್ವ ಶ್ರೀ ಉತ್ತಮವಾಗಿ ನಟಿಸಿದ್ದಾರೆ.

ಊರಿನ ಯಜಮಾನನಾಗಿ ರಮೇಶ್ ಪಂಡಿತ್, ಶ್ರೀಕಂಠನ ಪಾತ್ರದಲ್ಲಿ ಶ್ರೀಹರ್ಷ ಗಮನ ಸೆಳೆಯುತ್ತಾರೆ.

ಕಲಾತ್ಮಕತೆಯನ್ನು ಚಿತ್ರದಲ್ಲಿ ಇಷ್ಟಪಡುವವರಿಗೆ ಈ ಚಿತ್ರ ಹತ್ತಿರವಾಗಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!