2025ರ ಕುಂಭಮೇಳದಲ್ಲಿ ಸದ್ದು ಮಾಡಿದ್ದ ವೈರಲ್ ಹುಡುಗಿ ಮೊನಾಲಿಸಾ ಮುಸ್ಲಿಂ ಪ್ರಿಯಕರ ಮೊಹಮ್ಮದ್ ಫರ್ಮಾನ್ ನ್ನು ಕೇರಳದಲ್ಲಿ ಮದುವೆ ಆಗಿದ್ದಾರೆ.
ವಿವಾಹ ಹಿಂದೂ ದೇವಾಲಯದಲ್ಲಿ ನಡೆದಿದ್ದು, ಫರ್ಮಾನ್ ಅವರು ಮೊನಾಲಿಸಾಗೆ ತಾಳಿ ಕಟ್ಟಿ ಕುಂಕುಮ ಹಾಕಿದರು. ಸ್ಥಳೀಯ ಜನರು ಮತ್ತು ರಾಜಕೀಯ ಮುಖಂಡರು ನವ ದಂಪತಿಗೆ ಬೆಂಬಲ ವ್ಯಕ್ತಪಡಿಸಿ ಹಾಜರಿದ್ದರು. ಕೇರಳ ಪೊಲೀಸರು ದಂಪತಿಗೆ ವಿಶೇಷ ಭದ್ರತೆ ಒದಗಿಸಿದರು.
ವಿವಾಹದ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೊನಾಲಿಸಾ ಮತ್ತು ಫರ್ಮಾನ್ “ರಿಯಲ್ ಕೇರಳ ಸ್ಟೋರಿ” ಎಂಬ ಫಲಕ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಇದೇ ವೇಳೆ ಮಲಯಾಳಂ ಚಿತ್ರದ ಚಿತ್ರೀಕರಣಕ್ಕಾಗಿ ತಿರುವನಂತಪುರದಲ್ಲಿರುವ ಮೊನಾಲಿಸಾ, ಥಂಪನೂರು ಪೊಲೀಸ್ ಠಾಣೆಗೆ ಬಂದು ತಮ್ಮ ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ದಾಖಲಿಸಿದ್ದಾರೆ.
ಮೊನಾಲಿಸಾ ದೂರಿನಲ್ಲಿ ತಮ್ಮ ತಂದೆ ಆಯ್ಕೆ ಮಾಡಿದ ವ್ಯಕ್ತಿಯೊಂದಿಗೆ ಬಲವಂತದ ಮದುವೆ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು “ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ” ಎಂದು ತಿಳಿಸಿದ್ದಾರೆ.
ಮಹಾಕುಂಭಮೇಳದಲ್ಲಿ ವೈರಲ್ ಆದ ನಂತರ ಮೊನಾಲಿಸಾಗೆ ಸಿನಿಮಾ ಆಫರ್‌ಗಳು ಬಂದವು. ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ಮೊದಲ ಅವಕಾಶ ಪಡೆದರೂ ನಿರ್ಮಾಪಕರ ವಿರುದ್ಧ ಆರೋಪ ಬಂದಿದ್ದವು. ಈ ನಡುವೆ ಮೊನಾಲಿಸಾ ಪಿ. ಬಿನು ವರ್ಗೀಸ್ ನಿರ್ದೇಶನಮತ್ತು ಜೀಲಿ ಜಾರ್ಜ್ ನಿರ್ಮಿಸಿದ ‘ನಾಗಮ್ಮ’ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ.
_





Be the first to comment