ಮಹಾಕುಂಭಮೇಳದಲ್ಲಿ ಎಲ್ಲರ ಗಮನ ಸೆಳೆದಿದ್ದ ನೀಲಿ ಕಣ್ಣುಗಳ ಚೆಲುವೆ ಮೊನಾಲಿಸಾ ಭೋಸ್ಲೆ ಹಾಗೂ ಸಮರ್ಥ್ ಮೆಹ್ತಾ ಅಭಿನಯದ ‘ದಿಲ್ ಜಾನಿಯಾ’ ರೊಮ್ಯಾಂಟಿಕ್ ಆಲ್ಬಂ ಸಾಂಗ್ ಬಿಡುಗಡೆಗೊಂಡಿದೆ.
ವಿಶೇಷ ಹಾಡಿನಲ್ಲಿ ಮೊನಾಲಿಸಾ, ನಟ ಸಮರ್ಥ್ ಮೆಹ್ತಾ ಜೊತೆ ಹೆಜ್ಜೆ ಹಾಕಿದ್ದಾರೆ. ಹನಿಮನಿ ಪ್ರೊಡಕ್ಷನ್ ಹೌಸ್ ನಿರ್ಮಾಣದ ಈ ಗೀತೆಯನ್ನು ರಿಥಮ್ ಸಂಧ್ಯಾ ನಿರ್ದೇಶನ ಮಾಡಿದ್ದಾರೆ. ರಾಜಾ ಹರ್ಭಜನ್ ಸಿಂಗ್ ಸಂಗೀತ ಸಂಯೋಜಿಸಿದ್ದು, ಗಗನ್ದೀಪ್ ಸಾಹಿತ್ಯ ಬರೆದಿದ್ದಾರೆ. ಈ ಹಾಡು ವೀನಸ್ ಓರಿಜಿನಲ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡಿದೆ. ಹಾಡಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕುಂಭಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಎಲ್ಲರ ಮನ ಗೆದ್ದ ಮೊನಾಲಿಸಾ ತೆರೆಯ ಮೇಲೆ ಕಾಣಿಸಿಕೊಂಡಿರುವುದು ಆಕೆಯ ಅಭಿಮಾನಿಗಳಿಗೆ ಸಂತೋಷ ನೀಡಿದೆ.
ಮೊನಾಲಿಸಾ ಭೋಸ್ಲೆ ಕಳೆದ ಒಂದು ವರ್ಷದಿಂದ ‘ದಿ ಮಣಿಪುರ ಡೈರಿ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಳಿಕ ಬಿಡುಗಡೆ ದಿನಾಂಕ ಘೋಷಿಸುವುದಾಗಿ ಚಿತ್ರತಂಡ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೊನಾಲಿಸಾ ಫೋಟೋ ಹಾಗೂ ವಿಡಿಯೋಗಳು ವೈರಲ್ ಆದ ನಂತರ ನಿರ್ದೇಶಕ ಸನೋಜ್ ಮಿಶ್ರಾ ‘ದಿ ಡೈರಿ ಆಫ್ ಮಣಿಪುರ’ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.
—–





Be the first to comment