ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸ್ಟಾರ್ ಮೋಹನ್ ಲಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆ ಮೋಹನ್‌ಲಾಲ್ ಅವರು ಮುಂದಿನ ವಾರ ಕೊಚ್ಚಿಯ ತಮ್ಮ ಕಚೇರಿಯಲ್ಲಿ ಇಡಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 10 ಕೋಟಿ ರೂ. ವಂಚನೆಗೈದ ಆರೋಪದ ಮೇಲೆ ಕೇರಳ ಪೊಲೀಸರು ಮೋನ್ಸನ್ ಎಂಬಾತನನ್ನು ಬಂಧಿಸಿದ್ದರು. ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕೇರಳ ಪೊಲೀಸರ ಪ್ರಕಾರ, ಕೇರಳದ ನಿವಾಸಿಯಾದ ಮೋನ್ಸನ್ ಹಲವಾರು ವರ್ಷಗಳಿಂದ ಕಲಾಕೃತಿಗಳು ಮತ್ತು ಅವಶೇಷಗಳ ಸಂಗ್ರಹಕಾರನಂತೆ ನಟಿಸಿ ಜನರಿಗೆ 10 ಕೋಟಿ ರೂ. ವಂಚಿಸಿದ್ದ ಎಂದು ತಿಳಿದು ಬಂದಿದೆ.
ಮೋಹನ್ ಲಾಲ್ ಅವರು ಮೋನ್ಸನ್ ಅವರ ಕೇರಳ ನಿವಾಸಕ್ಕೆ ಒಮ್ಮೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಭೇಟಿಯ ಕಾರಣ ತಿಳಿದಿಲ್ಲ.
ಪುರಾತನ ಕಲಾಕೃತಿಗಳ ಡೀಲರ್ ಮತ್ತು ವಂಚಕ ಮೋನ್ಸನ್ ಮಾವುಂಕಲ್ ಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಬಗ್ಗೆ ಅಧಿಕಾರಿಗಳು ಮೋಹನ್ ಲಾಲ್ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ.
————————————-
Be the first to comment