Mohanlal : ವಾಲಿಬನ್ ಶೀರ್ಷಿಕೆ ರಿವೀಲ್

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಹೊಸ ಚಿತ್ರ ’ಮಲೈಕೊಟ್ಟೈ ವಾಲಿಬನ್’ ಸಿನಿಮಾವು ಮಲೆಯಾಳಂ ಸೇರಿದಂತೆ ಕನ್ನಡ,ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ.

ಜಾನ್ ಅಂಡ್ ಮೇರಿ ಕ್ರಿಯೆಟೀವ್ ಬ್ಯಾನರ್ ಅಡಿಯಲ್ಲಿ ಸೆಂಚೂರಿ ಫಿಲ್ಮಿಸ್ ಮತ್ತು ಮಾಕ್ಸ್‌ಲ್ಯಾಬ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ನಿನ್ನೆಯಷ್ಟೇ ಮೋಹನ್‌ಲಾಲ್ ಶೀರ್ಷಿಕೆಯನ್ನು ಟ್ವಿಟರ್‌ದಲ್ಲಿ ರಿವೀಲ್ ಮಾಡಿರುತ್ತಾರೆ.

ಯಶಸ್ವಿ ಚಿತ್ರಗಳನ್ನು ನೀಡಿರುವ ಜೋಸ್‌ಪೆಲ್ಲಿಸ್ಸರಿ ರಚನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ತಮಿಳು ಸಿನಿಮಾದ ಶೀರ್ಷಿಕೆಯಿಂದ ಸ್ಪೂರ್ತಿ ಪಡೆದ ನಿರ್ದೇಶಕರು ಕಥೆಯ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಆದರೂ ತನ್ನ ಹರಿತವಾದ ಲೇಖನಿಯಿಂದ ಅಸಾಂಪ್ರದಾಯಿಕ ಶೈಲಿಯ ಚಿತ್ರಕಥೆಯನ್ನು ಸೃಷ್ಟಿಸಿರುವುದು ವಿಶೇಷ. ಹೆಚ್ಚಾಗಿ ಇವರ ಸಿನಿಮಾಗಳು ಸೈಕಲಾಜಿಕಲ್ ಥ್ರಿಲ್ಲರ್, ಸಾಹಸ ಹಾಗೂ ಮನರಂಜನೆಯಿಂದ ಕೂಡಿರುತ್ತದೆ.

ಮೋಹನ್‌ಲಾಲ್ ಮಲೈಕೊಟ್ಟೈ ಸ್ಥಳದಲ್ಲಿ ಆಂಗ್ರಿ ಯಂಗ್‌ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡುಗಳಿಗೆ ಪ್ರಶಾಂತ್‌ಪಿಳ್ಳೈ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಶಸ್ತಿ ವಿಜೇತ ಮಧುನೀಲಕಂದನ್ ಛಾಯಾಗ್ರಹಣ, ಸಂಕಲನ ದೀಪುಜೋಸೆಫ್, ಸಾಹಸ ವಿಕ್ರಂಮೋರ್, ಕಾಸ್ಟ್ಯೂಮ್ ಸುಜಿತ್‌ಸುಧಾಕರನ್, ಮೇಕಪ್ ರೋನೆಕ್ಸ್‌ಜೇವಿಯರ್ ಅವರದಾಗಿದೆ.

ಸಂಪೂರ್ಣ ಚಿತ್ರೀಕರಣವನ್ನು ರಾಜಸ್ಥಾನದ ಸುಂದರ ತಾಣಗಳಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ಮಿಕ್ಕಂತೆ ನಾಯಕಿ, ಕಲಾವಿದರ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.

’ಕೆಜಿಎಫ್’ ಚಿತ್ರವು ಎಲ್ಲಾ ಭಾಷೆಗೆ ಡಬ್ ಆಗಿ ಹಿಟ್ ಆದ ಹಿನ್ನಲೆಯಲ್ಲಿ, ಈಗ ಬೇರೆ ಭಾಷೆಯ ಚಿತ್ರಗಳು ಇತರೆ ಭಾಷೆಗಳಲ್ಲಿ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!