ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ದುಬೈನ ಬುರ್ಜ್ ಖಲೀಫಾದಲ್ಲಿ ಫ್ಲಾಟ್ ಖರೀದಿಸಿದ ಏಕೈಕ ಭಾರತೀಯ ನಟ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಸುಮಾರು 828 ಮೀಟರ್ ಎತ್ತರ, 163 ಮಹಡಿಗಳನ್ನು ಹೊಂದಿರುವ ಬುರ್ಜ್ ಖಲೀಫಾ ದುಬೈನಲ್ಲಿ ಮಾತ್ರವಲ್ಲದೆ ವಿಶ್ವದ ಅತಿ ಎತ್ತರದ ಕಟ್ಟಡವಾಗಿದೆ. ಮೋಹನ್ ಲಾಲ್ ಬುರ್ಜ್ ಖಲೀಫಾದ 29 ನೇ ಮಹಡಿಯಲ್ಲಿ ಸಿಂಗಲ್ ಬೆಡ್ ರೂಮ್ ಖರೀದಿಸಿದ್ದಾರೆ. ಇದಕ್ಕಾಗಿ ಅವರು ಸುಮಾರು 35 ಕೋಟಿ ರೂ. ಖರ್ಚು ಮಾಡಿದ್ದಾರೆ. ನಂತರ ಅದನ್ನು ತಮ್ಮ ಪತ್ನಿ ಸುಚಿತ್ರಾ ಹೆಸರಿನಲ್ಲಿ ನೋಂದಾಯಿಸಿದ್ದಾರೆ. ಮೋಹನ್ ಲಾಲ್ ದುಬೈನ ಮತ್ತೊಂದು ದೊಡ್ಡ ವಿಲ್ಲಾದಲ್ಲಿ 3 BHK ಫ್ಲಾಟ್ ನ್ನು ಸಹ ಖರೀದಿಸಿದ್ದಾರೆ.
ತೆಲುಗು ನಟರಾದ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಕೂಡ ದುಬೈನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ ಎಂಬ ವದಂತಿಗಳಿವೆ. ಆದ ಇವುಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಬುರ್ಜ್ ಖಲೀಫಾದಲ್ಲಿ ಅನೇಕ ಮಿಲಿಯನೇರ್ ಮತ್ತು ಸೆಲೆಬ್ರಿಟಿಗಳು ಫ್ಲಾಟ್‌ಗಳನ್ನು ಖರೀದಿಸುತ್ತಿದ್ದಾರೆ.
ಇತ್ತೀಚೆಗೆ ಮೋಹನ್ ಲಾಲ್ ಅವರ ಎಲ್ 2 ಎಂಪುರಾನ್ ಮತ್ತು ತುಡಾರಂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಗಳಿಸಿವೆ.
—-





Be the first to comment