ಮೊದಲ ಮಳೆ ಎನ್ನುವುದು ರೈತನಿಗೆ ಬಹಳ ಮುಖ್ಯವಾದದ್ದು. ಇಲ್ಲಿ ಮೊದಲ ಮಳೆ ನಾಯಕ ಕನಸು. ಅದುವೇ ಮದುವೆ. ಮೊದಲ ಮಳೆಯಲ್ಲಿ ನೆನೆಯಲು ಸಿನಿಮಾ ತಂಡ ರೆಡಿಯಾಗಿದ್ದು, ಇಂದು ಸಂತಸ ಹಂಚಿಕೊಳ್ಳಲು ಮಾಧ್ಯಮದವರ ಮುಂದೆ ಬಂದಿದ್ದರು.
ಈ ವೇಳೆ ನಿರ್ಮಾಪಕ ಮತ್ತು ನಟ, ರಾಜ ನರಸಿಂಹ ಮಾತನಾಡಿ, ಮೊದಲ ಮಳೆ ಸಿನಿಮಾ ರಿಲೀಸ್ ಆಗ್ತಾ ಇದೆ. ಅಣ್ಣಾವ್ರು ಯಾವಾಗಲೂ ಹೇಳ್ತಾ ಇದ್ರು ಅಭಿಮಾನಿಗಳೇ ನಮ್ಮನೆ ದೇವ್ರು ಅಂತಿದ್ರು. ಬಡವರ ಮಕ್ಕಳು ಬೆಳಿಬೇಕು. ಯಾರು ಇಲ್ಲ ಅಂತ ಬಂದು ಇಂಡಸ್ಟ್ರಿಗೆ ನಿಂತಾಗ ಎಲ್ಲರು ಸಪೋರ್ಟ್ ಮಾಡಿದ್ದಾರೆ. ಸಿನಿಮಾ ಮಾಡುವಾಗ ಸಾಕಷ್ಟು ಪ್ತಾಣ ಹೋಗುವಂತ ಘಟನೆಗಳು ನಡೆದಿದೆ. ಆದ್ರೆ ಎಲ್ಲದರಿಂದ ಬಚಾವ್ ಆಗಿ ಬಂದಿದ್ದೀವಿ.
ಮೊದಲ ಮಳೆಗಾಗಿ ಇಡೀ ತಂಡ ಶ್ರಮಿಸಿದೆ. ಮೊದಲ ಮಳೆಯಲ್ಲಿ ಜವರಾಯ ಎಂಬ ಪಾತ್ರ ಮಾಡ್ತಾ ಇದ್ದೀನಿ. ಹಳ್ಳಿಯಿಂದ ಸಿಟಿಗೆ ಬಂದ ಹುಡುಗ ಏನು ಮಾಡುತ್ತಾನೆ..? ಮದುವೆ ಎಂಬ ವಿಚಾರ ಬಂದಾಗ ಏನೆಲ್ಲಾ ಮಾಡುತ್ತಾರೆ ಎಂಬುದು ಸಿನಿಮಾದ ಕಥೆ. ಒಂಭತ್ತು ಹೀರೋಹಿನ್ ಇದ್ದಾರೆ.
ನಿರ್ದೇಶಕ ರಾಜ್ ಶರಣ್ ಮಾತನಾಡಿ, ಸಿನಿಮಾ 45 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಸಂಗೀತ ಚೆನ್ನಾಗಿ ಬಂದಿದೆ. ಇದು ನನ್ನ ಎರಡನೇ ಸಿನಿಮಾ. ಸಿನಿಮಾದಲ್ಲಿ ಹಾರಾರ್, ಕುತೂಹಲಕಾರಿ ಸನ್ನಿವೇಶವಿದೆ ಎಂದಿದ್ದಾರೆ.
ಹಿರಿಯ ನಟ ಕರಿಸುಬ್ಬು ಮಾತನಾಡಿ, ಮೊದಲ ಮಳೆ.. ಕೊರೊನಾ ಆದ ಮೇಲೆ ಮೊದಲು ಆಕ್ಟ್ ಮಾಡಿದ ಸಿನಿಮಾ. ಲೊಕೇಷನ್ ಕಳ್ಸುದ್ರು ಹೋದೆ. ಅಲ್ಲಿ ಉದಾಸಿನವಾಗಿ ನನ್ನ ಪಾತ್ರ ಮಾಡಿ ಬಂದೆ. ಎರಡು ದಿನ ಶೂಟ್ ಇತ್ತು. ಆದರೆ ಇಡೀ ಸಿನಿಮಾದಲ್ಲಿ ನಾನಿದ್ದೀನಿ. ಮೂರ್ತಿ ಚಿಕ್ಕದು. ತೆರೆಮೇಲೆ ದಿಡ್ಡದಾಗಿ ಚೆನ್ನಾಗಿ ಕಾಣ್ತಾ ಇದ್ದಾರೆ. ಮೊದಲ ಸಿನಿಮಾದಲ್ಲಿಯೇ ಒಂಭತ್ತು ನಟಿಯರಿದ್ದಾರೆ. ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ರಾಜ್ ಶರಣ್ ಎರಡನೇ ಸಿನಿಮಾ ಇದು ಎಂದಿದ್ದಾರೆ.
Be the first to comment