Modala Male : 9 ಹೀರೋಯಿನ್ ಗಳ ಸಮಾಗಮ ಮೊದಲ ಮಳೆ

9 ಹೀರೋಯಿನ್ ಗಳ ಪಾತ್ರ hondiruvanಮೊದಲ ಮಳೆ ಚಿತ್ರದ ಬಗ್ಗೆ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಹಲವು ಮಾಹಿತಿ ನೀಡಿತು.

ಮೊದಲ ಮಳೆಯನ್ನು ಸಾಕಷ್ಟು ಶ್ರದ್ಧೆಯಿಂದ ಮಾಡಿದ್ದೇವೆ. ನಾನೊಬ್ಬ ಹೀರೋ ಎನ್ನುವುದಕ್ಕಿಂತ ಆರ್ಟಿಸ್ಟ್  ಆಗಲು ಇಷ್ಟ ಪಡುತ್ತೇನೆ ಎಂದು ನಿರ್ಮಾಪಕ ಮತ್ತು ನಟ ರಾಜಾನರಸಿಂಹ ಹೇಳಿದ್ರು.

ಇದೊಂದು ಆನಂದದ ಮಳೆ. ವೀಕ್ಷಕರಿಗೆ ಚಿತ್ರದಲ್ಲಿ ಏನು ಬೇಕು ಅದೆಲ್ಲವನ್ನು ಪ್ಯಾಕೇಜ್ ರೀತಿಯಲ್ಲಿ ನೀಡಿದ್ದೇವೆ. ಚಿತ್ರದಲ್ಲಿ 9 ನಾಯಕಿಯರು ಯಾಕೆ ಇದ್ದಾರೆ ಎನ್ನುವುದನ್ನು ನೀವು ಚಿತ್ರ ನೋಡಿ ತಿಳಿಯಬೇಕು. ಎಲ್ಲ ನಾಯಕಿಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಿರ್ದೇಶಕ ರಾಜಶರಣ್ ಮಾತನಾಡಿ, ಹಿಂದೆ ‘ಎಮ್ಮೆತಿಮ್ಮ’ ಎಂಬ ಕಿರು ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ರಾಜಾನರಸಿಂಹ ನನಗೆ 5 ವರ್ಷದ ಸ್ನೇಹಿತರು, ಅವರಿಗಾಗಿಯೇ ಒಂದು ಕಥೆ ಮಾಡಿದೆ, ಆ ಚಿತ್ರ ಆಗಲಿಲ್ಲ, ಇವರುಗೇನು 10 ಜನ ಹೀರೋಯಿನ್ ಇಟ್ಕೊಂಡು ಸಿನಿಮಾ ಮಾಡಕ್ಕಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ, ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲಮಳೆ ಇದ್ದಹಾಗೆ, ನಾಯಕನ ಲೈಫ್ ನಲ್ಲೂ ಮೊದಲಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರ.

ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ 40 ದಿನ ಚಿತ್ರೀಕರಣ ನಡೆಸಿದ್ದೇವೆ. ಹಾರರ್ ಕಂಟೆಂಟ್ ಇರುವ ಕಾರಣ ಚಿತ್ರಕ್ಕೆ ಯು/ಎ ಸಿಕ್ಕಿದೆ ಎಂದು ಹೇಳಿದರು. ಉಳಿದಂತೆ ನಟ ಗಣೇಶರಾವ್, ಜೋತಿ ಮರೂರು, ರಾಜ್ ಅಲ್ಲದೆ ಹಾಜರಿದ್ದ ನಾಲ್ವರು ನಾಯಕಿಯರು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ನಾಯಕಿ ಸಾಹಿತ್ಯ ಪ್ರಕಾಶ್ ಮಾತನಾಡಿ , ಈ ಹಿಂದೆ ಒಂದು ಚಿತ್ರದಲ್ಲಿ ನಟನೆ ಮಾಡಿದೀನಿ. ಅಮೃತಾ ಎನ್ನುವ ಪಾತ್ರದಲ್ಲಿ ಕುಂಟಿಯ ಪಾತ್ರ ಮಾಡುತ್ತಿದ್ದೇನೆ ಎಂದರು.

ಮೊದಲೇ ಮಳೆ ಚಿತ್ರ ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಚಿತ್ರವನ್ನು ರಮೇಶ್ ಎಚ್ಎಲ್ ಅವರು ನಿರ್ಮಿಸಿದ್ದಾರೆ. ರಾಜೇಶ್ ಕೃಷ್ಣನ್ ಸೇರಿದಂತೆ ಪ್ರಮುಖ ಗಾಯಕರು ಚಿತ್ರಕ್ಕೆ ಹಾಡಿದ್ದಾರೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!