ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾ ಬಿಡುಗಡೆಯಾದ ಇಂದು 2000ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಇನ್ನು ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ನಿನ್ನೆ ರಾತ್ರಿ 12ರಿಂದ ಇಂದು ರಾತ್ರಿ ಹನ್ನೆರಡರ ವರೆಗೆ ಸತತ 24 ಗಂಟೆಗಳ ಕಾಲ ಪ್ರದರ್ಶನ ಕಂಡಿದ್ದೊಂದು ದಾಖಲೆ. ವಿದೇಶಗಳಲ್ಲೂ ಪುನೀತ್‍ಗೆ ಅಭಿಮಾನಿ ಬಳಗವಿರುವುದು ಅವರ ಈ ಹಿಂದಿನ ಚಿತ್ರಗಳಲ್ಲಿ ಸಾಬೀತಾಗಿದೆ. ಈಗ ನಾಳೆಯಿಂದ ‘ನಟಸಾರ್ವಭೌಮ’ ಕೂಡ ವಿವಿಧ ದೇಶಗಳಲ್ಲಿ ಪ್ರದರ್ಶನ ಕಾಣಲಿದೆ. ಅಮೆರಿಕದ 45ಕ್ಕೂ ಹೆಚ್ಚು, ಆಸ್ಟ್ರೇಲಿಯಾದ 24 ಸ್ಕ್ರೀನ್‍ಗಳಲ್ಲದೆ ಫ್ರಾನ್ಸ್, ಕೆನಡಾ, ದುಬೈ ಮತ್ತು ಸಿಂಗಾಪೂರಕ್ಕೂ ಚಿತ್ರ ಹೋಗಲಿದೆ.
ನಟ ಅಂಬರೀಶ್ ಅವರ ಅಣ್ಣನ ಮಗ ಮದನ್ ಮತ್ತು ಅವರ ಪತ್ನಿ ವಿದೇಶಗಳಲ್ಲಿ ಚಿತ್ರದ ವಿತರಣೆ ಹೊಣೆ ಹೊತ್ತಿದ್ದಾರೆ. ರಷ್ಯಾ, ಕೀನ್ಯಾ ಮತ್ತು ಜಪಾನ್‍ನಲ್ಲೂ ಕನ್ನಡಿಗರ ಸಂಖ್ಯೆ ದೊಡ್ಡದಿದೆ. ಇಲ್ಲಿಯವರೆಗೆ ಅಲ್ಲಿ ಯಾವುದೇ ಕನ್ನಡ ಚಿತ್ರಗಳು ತೆರೆಕಂಡಿಲ್ಲ. ಮದನ್ ದಂಪತಿ ಮೊದಲ ಬಾರಿಗೆ ಆ ದೇಶಗಳಿಗೆ
‘ನಟಸಾರ್ವಭೌಮ’ನನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಹೊಸ ಮಾರುಕಟ್ಟೆ ಪ್ರವೇಶಿಸಿದಂತಾಗಿದೆ.
Be the first to comment