ಅಟ್ಟಯ್ಯ ಸಿನಿಮಾ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ದ್ವಿತೀಯ ಚಿತ್ರ ಹಾಫ್. ಅದ್ಧೂರಿ ಫೋಟೋ ಶೂಟ್ ನಡೆಸಿದ ನಂತರ ಚಿತ್ರೀಕರರಣಕ್ಕೆ ತೆರಳಿದ್ದ ಹಾಫ್ ತಂಡ ಈಗ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಳಿಸಿದೆ. ಈ ಹಂತದಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆಯಲ್ಲಿ ಒಂದು ಫೈಟ್ ಕೂಡಾ ಚಿತ್ರೀಕರಣಗೊಂಡಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹದಿನೈದು ದಿನಗಳ ಕಾಲದ ಈ ಶೆಡ್ಯೂಲ್ ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.
ನಾಯಕನ ಜೊತೆಗೆ ಹೆಸರಿಡಲಾಗದ ಸಂಬಂಧಕ್ಕೆ ಹೊಂದಿದ್ದ ಬೇಗಂ ಅನ್ನು ಕಿಡ್ನಾಪ್ ಮಾಡಿದ ಕಾರಣಕ್ಕೆ ನಡೆಯುವ ರೋಚಕ ಸಾಹಸ ಸನ್ನಿವೇಶವನ್ನು ಥ್ರಿಲ್ಲರ್ ಮಂಜು ಬಿಭಿನ್ನ ರೀತಿಯಲ್ಲಿ ಚಿತ್ರೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಹ ಕಲಾವಿದರು ಮತ್ತು ಸಾಹಸ ಕಲಾವಿದರು ಸೇರಿ ನೂರೈವತ್ತಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದುವರೆಗೆ ಹೊಸಬರ ನೂರಾರು ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದೇನೆ. ಆದರೆ ಲೋಕೇಂದ್ರ ಅವರ ತಂಡವನ್ನು ನೋಡಿದರೆ ನಿಜಕ್ಕೂ ಇವರೆಲ್ಲಾ ಹೊಸಬರಾ ಎನ್ನುವ ಅನುಮಾನ ಮೂಡುತ್ತದೆ. ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವುದು ಕಷ್ಟದ ಕೆಲಸ. ಅನುಭವಿಗಳಿದ್ದರೆ ಮಾತ್ರ ಸರಾಗವಾಗಿ ಮತ್ತು ಅಂದುಕೊಂಡಂತೆ ಶಾಟ್ಸ್ ಕಂಪೋಸ್ ಮಾಡಲು ಸಾಧ್ಯ. ಹೊಸಬರು ಅಂದ ಕೂಡಲೇ ಅವರಿಗೆ ಏಲ್ಲವನ್ನೂ ಹೇಳಿಕೊಟ್ಟು, ಸಮಯ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಲೋಕೇಂದ್ರ ಮತ್ತವರ ತಂಡದ ಕಾರ್ಯ ವೈಖರಿಯನ್ನು ಕಂಡು ಇವರೆಲ್ಲ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿಬಂದಿದ್ದಾರೇನೋ ಅನ್ನಿಸಿಬಿಟ್ಟಿತು. ಒಂದು ದಿನಕ್ಕೆ ಐವತ್ತೆರಡು ಓಕೆ ಟೇಕ್ ಗಳನ್ನು ಶೂಟ್ ಮಾಡಿದ್ದೇನೆ. ಹೊಸದಾಗಿ ಚಿತ್ರರಂಗಕ್ಕೆ ಬಂದಿರುವವರಿಂದ ಈ ಮಟ್ಟಿಗಿನ ಕೆಲಸ ತೆಗೆಸಿಕೊಳ್ಳುವುದು ನಿಜಕ್ಕೂ ದಾಖಲೆಯೇ ಸರಿʼʼ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ʻಹಾಫ್ʼ ತಂಡವನ್ನು ಹೊಗಳಿದ್ದಾರೆ.ವರ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ದಾಖಲೆ ನಿರ್ಮಿಸಿರುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ.
ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಮುಂತಾದವರ ತಾರಾಗಣವಿದೆ. ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶನ, ಕಲೆ ಶಿವಕಾಂತ್, ಪ್ರಚಾರಕಲೆ : ಮಾಬಸಕಿ (ಕಿರಣ್), ಎಂ.ಜಿ. ಕಲ್ಲೇಶ್ ಪತ್ರಿಕಾಸಂಪರ್ಕವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ನೆರವೇರಲಿದೆ. ಈ ವರೆಗೆ ಭಾರತೀಯ ಚಿತ್ರರಂಗದಲ್ಲೇ ಯಾರೂ ಮುಟ್ಟಿರದ ಕಥಾವಸ್ತು ನಮ್ಮ ʻಹಾಫ್ʼ ಚಿತ್ರದ್ದು. ಶೀರ್ಷಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಈ ಹಿಂದೆಯೇ ಹೇಳಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ರೋಚಕ ವಿವರಗಳನ್ನು ನೀಡುತ್ತೇನೆ. ಖಂಡಿತವಾಗಿಯೂ ಇಡೀ ಇಂಡಿಯಾ ತಿರುಗಿನೋಡುವಂಥಾ ಕಥಾವಸ್ತು ನನ್ನ ಚಿತ್ರದಲ್ಲಿದೆʼʼ ಎನ್ನುವುದು ನಟ, ನಿರ್ದೇಶಕ ಲೋಕೇಂದ್ರ ಸೂರ್ಯ ನುಡಿ.
Be the first to comment