ಮುಸ್ಸಂಜೆ ಮಹೇಶ್ ಕನ್ನಡದಲ್ಲಿ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾದೊಂದಿಗೆ ಕೈ ಜೋಡಿಸಿದ್ದಾರೆ. ನೈಜ ಘಟನೆಗಳನ್ನೇ ಆಧರಿಸಿ ನಿರ್ಮಾಣವಾಗಿರುವ ಚಿತ್ರದ ಹೆಸರು “ಎಂಎಂಸಿಎಚ್”. ಕಾಲೇಜು ಮೆಟ್ಟಿಲು ಹತ್ತುವ ಹುಡುಗಿಯರ ತಲ್ಲಣವನ್ನು ಸಿನಿಮಾದಲ್ಲಿ ಹೇಳ ಹೊರಟಿದ್ದಾರೆ. ಈ ಕಾಲದಲ್ಲಿ ಹೆಣ್ಮ್‍ಕ್ಳು ಎಷ್ಟರ ಮಟ್ಟಿಗೆ ಸ್ಟ್ರಾಂಗಾಗಿದ್ದಾರೆ ಅನ್ನೋದನ್ನ ಮಹೇಶ್ ಈ ಚಿತ್ರದ ಮೂಲಕ ತೊರಿಸಿಕೊಟ್ಟಿದ್ದಾರೆ.
ಈ ಸಿನಿಮಾದ ವಿಶೇಷತೆ ಏನಪ್ಪಾ ಅಂದ್ರೆ, ಕನ್ನಡ ಚಿತ್ರರಂಗದ ನಾಲ್ವರು ಹಿರಿಯ ಕಲಾವಿದೆಯರ ಪುತ್ರಿಯರು ನಟಿಸಿರುವುದು. ಹೌದು, ಈ ಚಿತ್ರದಲ್ಲಿ ಹಿರಿಯ ಕಲಾವಿದೆಯರಾದ ವಿನಯಾ ಪ್ರಸಾದ್, ಸುಧಾ ಬೆಳವಾಡಿ, ಸುಮಿತ್ರ ಮತ್ತು ಪ್ರಮಿಳಾ ಜೋಷಾಯ್ ಪುತ್ರಿಯರು ನಾಯಕಿಯರಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.ಮೇಘನರಾಜ್, ಪ್ರಥಮಾ ಪ್ರಸಾದ್, ಸಂಯುಕ್ತಾ ಹೊರನಾಡು ಹಾಗೂ ದೀಪ್ತಿ ನಟಿಸಿ ಹೆಣ್ಮಕ್ಕಳಿದ್ದಾರೆ ಎಚ್ಚರ ಅನ್ನೋ ಹೊಸ ಸ್ಲೋಗನ್ ಕೊಟ್ಟಿದ್ದಾರೆ.
ವಿಭಿನ್ನ ಅನ್ಸುವ ಟೈಟಲ್‌ನ್ನೊತ್ತ ಎಂ.ಎಂ.ಸಿ.ಹೆಚ್.ನಲ್ಲಿ ನಾಲ್ಕು ನಾಯಕಿಯರೊಂದಿಗೆ ರಾಗಿಣಿ.. ಓನ್ಸ್ ಅಗೈನ್ ಖಾಕಿ ಪವರನ್ನ ಪ್ರದರ್ಶನ ಮಾಡಲಿದ್ದಾರೆ.ಅಂದ ಹಾಗೇ.. ಎಂ.ಎಂ.ಸಿ.ಹೆಚ್.. ನಾಯಕಿಯರ ಸುತ್ತ ಸುತ್ತುವ ಸಿನಿಮಾ ಆದ್ರೂ.. ಸಿನಿಮಾದಲ್ಲಿ ನಾಯಕನಾಗಿ ರಘು ಭಟ್ ಕಾಣಿಸಿಕೊಂಡಿದ್ದಾರೆ.
ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದ ಎಂ.ಎಂ.ಸಿ.ಹೆಚ್‌ಗೆ ಪುರುಷೋತ್ತಮ್ ನಿರ್ಮಾಪಕರು. ರಜಿನಿಕಾಂತ್ ಗೌಡ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್. ಹೀಗೇ ಹೊಸ ಕಾನ್ಸೆಪ್ಟ್ ನ ಹೇಳೊಕೆ ಹೊರಟಿರೋ ಎಮ್ ಎಮ್ ಸಿ ಹೆಚ್ ,ಶೀಘ್ರವೇ ತೆರೆಮೇಲೆ ಬರೋಕೆ ರೆಡಿ ಆಗಿದ್ದು,ರಾಗಿಣಿ ದ್ವಿವೇದಿ ಆ್ಯಕ್ಷನ್ ಜೊತೆಗೆ,ಈ ನಾಲ್ಕು ಹಿರಿಯ ಕಲಾವಿಧರ ಮಕ್ಕಳ ಆ್ಯಕ್ಟಿಂಗ್ ಹೇಗೆ ವರ್ಕ್ ಆಗುತ್ತೋ ನೋಡ್ಬೇಕು.
Be the first to comment