“ಮಿಸ್ಟರ್ ಡಿ” ಚಿತ್ರಕ್ಕೆ ಮಹೂರ್ತ

ಚಂದನವನದಲ್ಲಿ ಈಗ ಚಿತ್ರ ಚಟುವಟಿಕೆಗಳು ಪ್ರಾರಂಭವಾಗಿದ್ದು , ಹೊಸ ಚಿತ್ರದ ಮಹೂರ್ತಗಳು ಶುರುವಾಗತೊಡಗಿದೆ. ಅದರಂತೆ ನವರಾತ್ರಿ ಹಬ್ಬದ ಐದನೇ ದಿನದಂದು ಹೊಸಬರ “ಮಿಸ್ಟರ್ .ಡಿ” ಎನ್ನುವ ಚಿತ್ರವೊಂದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಹೂರ್ತ ಆಚರಿಸಿಕೊಂಡಿತು.

ಡಾ.ರಾಜ್‌ಕುಮಾರ್ ಅಳಿಯ ಎಸ್.ಎ.ಗೋವಿಂದರಾಜ್ ಕ್ಯಾಮಾರ್ ಆನ್ ಮಾಡಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ಶುರುವಾಗಬೇಕಿದೆ. ದಿನ ಚೆನ್ನಾಗಿದ್ದರಿಂದ ಪೂಜೆಯನ್ನು ನೆರೆವೇರಿಸಲಾಯಿತು.

ಡಿಟೆಕ್ಟ್, ಡ್ಯಾಡಿ, ಡಾಟರ್ ಇನ್ನು ತರಹೇವಾರಿ ಅರ್ಥ ಶೀರ್ಷಿಕೆಗೆ ಕೊಡುತ್ತದೆ. ಕತೆಯಲ್ಲಿ ಡಿ ಎನ್ನುವುದು ಒಂದು ಪಾತ್ರವಾಗಿರುತ್ತದೆ. ಒಬ್ಬ ಮನುಷ್ಯನಲ್ಲಿ ಎಲ್ಲಾ ಗುಣಗಳು ಇರುತ್ತದೆ. ವಿಶ್ವದಲ್ಲಿ ಯಾರೂ ಪರಿಪೂರ್ಣವಾಗಿರೊಲ್ಲ. ಕೆಟ್ಟತನ, ಒಳ್ಳೆತನ, ದೈವತ್ವ, ರಾಕ್ಷಸತ್ವ. ಪ್ರತಿಯೊಂದು ಪ್ರತಿಯೊಬ್ಬ ಮನುಷ್ಯನಲ್ಲಿ ಇರುತ್ತೆ.

ಅದನ್ನು ಡಿ ಪಾತ್ರದ ಮೂಲಕ ಅನಾವರಣ ಮಾಡುವ ಪ್ರಯತ್ನವಾಗಿದೆ. ಆತನ ಜೀವನದಲ್ಲಿ ಸುತ್ತುವಂತ 25 ವರ್ಷದ ಘಟನೆಗಳು ಪ್ರೇರಣೆ. ಸಮಾಜ ಘಾತಕರನ್ನು ಈ ಸಮಾಜದಲ್ಲಿ ಇಟ್ಟುಕೊಂಡು ಪತ್ತೆದಾರಿಯೊಬ್ಬ ಹೇಗೆ ಎದುರಿಸುತ್ತಾನೆ. ದೇವರನ್ನು ಹಿಂದಿಟ್ಟುಕೊಂಡು ಸತ್ಯವನ್ನು ಹುಡುಕುವುದೆ ಸಿನಿಮಾದ ಒಂದು ಏಳೆಯ ಸಾರಾಂಶವಾಗಿದೆ.

ವೃತ್ತಿಯಲ್ಲಿ ಪ್ರಸಿದ್ದ ಆರ್ಕಿಟೆಕ್ಟ್ ಆಗಿರುವ ಸಿ.ಸಿ.ರಮೇಶ್ ಇಪ್ಪತ್ತು ವರ್ಷದ ಕೆಳಗೆ ನಿರ್ದೇಶನ, ನಟನೆಯ ಕೋರ್ಸ್‌ನ್ನು ಮುಗಿಸಿದ್ದಾರೆ. ಕೆಲಸದ ನಿಮಿತ್ತ ಚಿತ್ರರಂಗಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಗ ಏನಾದರೂ ಬಣ್ಣದ ಲೋಕದಲ್ಲಿ ಸಾಧಿಸಬೇಕೆಂಬ ಹಂಬಲದಿಂದ ಸಿನಿಮಾಗೆ ಕತೆ ಬರೆದು ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಮಾಡುತ್ತಿದ್ದಾರೆ.

ಸಂಗೀತ ಅರ್ಜುನ್‌ಜನ್ಯಾ, ಚಿತ್ರಕತೆ ಬಿ.ಎ.ಮಧು, ಛಾಯಾಗ್ರಹಣ ಅಣಜಿನಾಗರಾಜು, ಕಲೆ ಪ್ರಕಾಶ್‌ಚಿಕ್ಕಪಾಳ್ಯ ಅವರದಾಗಿದೆ. ಮೂನ್ ಲೈಟ್ ಪ್ರೊಡಕ್ಷನ್ ಮತ್ತು ವೀರ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!