ಮಿಷನ್ ಇಂಪಾಸಿಬಲ್

ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದ ‘ಮಿಷನ್ ಇಂಪಾಸಿಬಲ್’

ಹಾಲಿವುಡ್ ನಟ ಟಾಮ್ ಕ್ರೂಸ್ ಅವರ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಗಳಿಕೆಯಲ್ಲಿ ಭರ್ಜರಿ ದಾಖಲೆ  ಬರೆದಿದೆ.

 ಕ್ರಿಸ್ಟೊಫರ್ ಮೆಕ್ವೈರ್ ನಿರ್ದೇಶನದ ಮಿಷನ್ ಇಂಪಾಸಿಬಲ್: ಫೈನಲ್ ರೆಕನಿಂಗ್’ ಸಿನಿಮಾ ನಿನ್ನೆ (ಮೇ 17) ಭಾರತದಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 17.50 ಕೋಟಿ ರೂಪಾಯಿ ಗಳಿಕೆ ಮಾಡಿದೆ.  ಭಾರತದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಮಾತ್ರವಾಗಿದೆ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ, ಮೆಟ್ರೊ , ಟೈರ್ 1 ಸಿಟಿಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ.  ಮಲ್ಟಿಪ್ಲೆಕ್ಸ್​ ಚೈನ್​ಗಳಲ್ಲಿ ಮಾತ್ರವೇ ಬಿಡುಗಡೆ ಆದರೂ  ಭಾರಿ ಮೊತ್ತವನ್ನು ಈ ಸಿನಿಮಾ ಕಲೆ ಹಾಕಿದೆ. ‘ಅವತಾರ್ 2’ ಸಿನಿಮಾ   ಭಾರತದಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಕಲೆ ಹಾಕಿರಲಿಲ್ಲ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಮಿಷನ್ ಇಂಪಾಸಿಬಲ್ ಸರಣಿಯ ಎಂಟನೇ ಸಿನಿಮಾ ಆಗಿದೆ. ಇದು ಈ ಸರಣಿಯ ಕೊನೆ ಸಿನಿಮಾ ಎನ್ನಲಾಗುತ್ತಿದೆ. 2023 ರಲ್ಲಿ ಬಿಡುಗಡೆ ಆಗಿದ್ದ ಮಿಷನ್ ಇಂಪಾಸಿಬಲ್ ಸರಣಿಯ ಎರಡನೇ ಭಾಗ ಇದಾಗಿದೆ.  ಸಿನಿಮಾ ನೋಡಿದವರು ಆಕ್ಷನ್ ದೃಶ್ಯಗಳನ್ನು  ಮೆಚ್ಚಿಕೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!