ಗುರುದತ್ತ ನಿರ್ದೇಶನದ ಮಿಸ್ ನಂದಿನಿ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಸರ್ಕಾರಿ ಶಾಲೆಯ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಚಿತ್ರವು ಸರ್ಕಾರಿ ಶಾಲೆಗಳ ಸ್ಥಿತಿ, ಅದರ ಮುಚ್ಚುವಿಕೆ ಮತ್ತು ಈ ಸಮಸ್ಯೆಗೆ ಪರಿಹಾರವನ್ನು ಎತ್ತಿ ತೋರಿಸುತ್ತದೆ. ಕನ್ನಡ ಭಾಷೆಯ ಪ್ರಾಮುಖ್ಯತೆಯ ಬಗ್ಗೆಯೂ ಚಿತ್ರವು ಚರ್ಚಿಸುತ್ತದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ನಾನು ಸಾಕಷ್ಟು ಹಾರರ್ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಸಮಯದಲ್ಲಿ ನನಗೆ ಈ ಪಾತ್ರ ಸಿಕ್ಕಿತು. ನಾನು ಉತ್ತರ ಭಾರತದಿಂದ ಬಂದವಳಾಗಿರುವುದರಿಂದ ಕನ್ನಡ ಶಿಕ್ಷಕಿಯಾಗಿ ನಟಿಸುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಜನ ನನ್ನನ್ನು ಕನ್ನಡ ಟೀಚರ್ ಎಂದು ಗುರುತಿಸುವುದಿಲ್ಲ ಎಂದುಕೊಂಡಿದ್ದೆ. ಆದರೆ ನಿರ್ದೇಶಕರು ಪಾತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ, ನನ್ನ ಬಹುಮುಖತೆಯನ್ನು ಸಾಬೀತುಪಡಿಸುವುದನ್ನು ನಾನು ಸವಾಲಾಗಿ ಸ್ವೀಕರಿಸಿದೆ ಎಂದು ಹೇಳಿದ್ದಾರೆ.
ಒಂದು ಸಿನಿಮಾ ಮಹಿಳಾ ಸಬಲೀಕರಣವನ್ನು ಸ್ಪರ್ಶಿಸಿದಾಗ ಮತ್ತು ಮಕ್ಕಳ ಸಮಸ್ಯೆಗಳನ್ನು ಚರ್ಚಿಸಿದಾಗ ನಾನು ಖಂಡಿತವಾಗಿಯೂ ಅದರ ಭಾಗವಾಗಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಚಿತ್ರದಿಂದ ಬರುವ ಲಾಭವನ್ನು ದೇಣಿಗೆ ನೀಡಲು ಪ್ರಿಯಾಂಕಾ ಮತ್ತು ತಂಡ ಯೋಜಿಸಿದೆ.
2023ರಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ಹೊಂದಿರುವ ಪ್ರಿಯಾಂಕಾ ‘ಮಿಸ್ ನಂದಿನಿ’ ಸಿನಿಮಾದೊಂದಿಗೆ ಈ ವರ್ಷವನ್ನು ಪ್ರಾರಂಭಿಸುತ್ತಿದ್ದಾರೆ. ಜನವರಿ 6 ರಂದು ಚಿತ್ರ ಬಿಡುಗಡೆ ಆಗಲಿದೆ.
__
Be the first to comment