ಮಿಸ್ ಎಲಿಗೆಂಟ್ ಏಷ್ಯಾ ಪೆಸಿಫಿಕ್ 2018-19 ರ ವಿಜೇತರಾದ ನಿಬೇದಿತಾ ಬಿಸ್ವಾಲ್ ರವರು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ, ಗೇಟ್ ವೇ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿ ಆಯೋಜಿಸಿದ್ದರು. ಸೌಂದರ್ಯ ಸ್ಪರ್ಧೆಯಾದ ಎಲಿಗೆಂಟ್ ಏಷ್ಯನ್ ಫೆಸಿಫಿಕ್ 2018-19 ರ ಕಿರೀಟವನ್ನು ಮುಡಿಗೇರಿಸಿಕೊಂಡ ವಿಚಾರವನ್ನು ತಿಳಿಸಿದ್ದಾರೆ. ಮಸ್ಕತ್ ಒಮಾನ್ ನಲ್ಲಿ ಡಿಸೆಂಬರ್ 14 ರಿಂದ 17 ರವರೆಗೆ ಝೆವೆಂಟ್ಸ್ ಮತ್ತು ಗಲ್ಫ್ ಯೂನಿಯನ್ ಇಂಟರ್’ನ್ಯಾಷನಲ್ ಎಲ್ ಎಲ್ ಸಿ ವತಿಯಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ನಿಬೇದಿತಾ ಬಿಸ್ವಾಲ್ ರವರು ಭಾರತವನ್ನು ಪ್ರತಿನಿಧಿಸಿದ್ದರು.
ಕನ್ನಡ ಚಿತ್ರರಂಗಕ್ಕೆ ಪ್ರವೇಶ:
ವೆಂಕಟೇಶ್ ಕುಮಾರ್ ನಿರ್ದೇಶನದ ಬಿ-ಪಾಸಿಟಿವ್ ಚಿತ್ರದಲ್ಲಿ ನಿಬೇದಿತಾ ಬಿಸ್ವಾಲ್ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವು ಜುಲೈ ತಿಂಗಳಿನಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.ಅದೇ ದಿನದಲ್ಲಿ ಚಲನಚಿತ್ರವನ್ನು 4 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಐಟಿ ಹಿನ್ನೆಲೆ ಹೊಂದಿರುವ ಮಿಸ್ ನಿಬೇದಿತಾ ಮಾಡೆಲಿಂಗ್ ಮತ್ತು ಆ್ಯಕ್ಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು. ವಿಶ್ವಾದ್ಯಂತ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಮಿಸ್ ಎಲಿಗೆಂಟ್ ಏಷ್ಯನ್ ಪೆಸಿಫಿಕ್ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ 2019 ರ ರೈಸಿಂಗ್ ಸ್ಟಾರ್ ಎಂಬ ಬಿರುದು ನಿಬೇದಿತಾ ಬಿಸ್ವಾಲ್ ರವರ ಸೇರಿಸಲ್ಪಟ್ಟಿತು, ಇದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
Be the first to comment