‘ಕೆಜಿಎಫ್’ ಚಿತ್ರದ ಗೆಲುವು ಇಡೀ ತಂಡ ಪಟ್ಟ ಶ್ರಮದ ಫಲ ಅನ್ನುವುದಕ್ಕಿಂತ, ತಾನು ಇರುವ ಬಾಡಿಗೆ ಮನೆಯಿಂದ ಒದಗಿಬಂದ ಅದೃಷ್ಟ ಎಂದು ನಂಬಿ ಬಿಟ್ಟಿದ್ರಾ ಯಶ್? ತನ್ನ ಸಾಮಥ್ರ್ಯಕ್ಕಿಂತ ಕಾಂಕ್ರೀಟ್ ಗೋಡೆಗಳ ಮೇಲಿನ ನಂಬಿಕೆ ಅತಿಯಾಗಿದ್ದೇ ಯಶ್ ತೀರಾ ಕೀಳುಮಟ್ಟಕ್ಕೆ ಇಳಿದು ಬಿಟ್ರಾ?.. ಈ ಸ್ಟೋರಿ ಓದಿ..
ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದು ಹತಾಶೆಯಲ್ಲಿ ಯಶ್ ಮನೆಯಲ್ಲಿದ್ದ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ನಟ ಯಶ್ ಅವರು ಕೋರ್ಟ್ ಆದೇಶದಂತೆ ಮೇ 31ರೊಳಗೆ ಅದೃಷ್ಟದ ಮನೆ ಎಂದೇ ಕರೆಯಲಾಗಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಇನ್ನೂ ಮನೆ ಖಾಲಿ ಮಾಡದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ಯಶ್ ಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳು ಬಾಡಿಗೆ 80 ಸಾವಿರ ರೂ.ಗಳ ಡಿಡಿಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿ, ಮನೆ ಖಾಲಿ ಮಾಡಿದ್ದರು.
ಮೇ 31 ಮುಗಿದರೂ ಯಶ್ ಕುಟುಂಬ ಮನೆ ಖಾಲಿ ಮಾಡಿಲ್ಲ ಎಂದು ಮನೆ ಮಾಲೀಕರು ಮತ್ತೆ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದರು ಎನ್ನಲಾಗಿದೆ. ಅಷ್ಟರಲ್ಲಿ, ಯಶ್ ಕುಟುಂಬ ಮನೆ ಖಾಲಿ ಮಾಡಿ ಕೀಯನ್ನು ಮನೆ ಮಾಲೀಕರಾದ ಡಾ. ಮುನಿಪ್ರಸಾದ್ ಅವರಿಗೆ ಹಸ್ತಾಂತರಿಸಿದೆ. ಅಲ್ಲದೆ ಬಾಕಿ ಉಳಿದಿದ್ದ 23 ಲಕ್ಷ ರೂ. ಹಣವನ್ನು ನೀಡಿ ವಿವಾದಕ್ಕೆ ತೆರೆ ಎಳೆದಿದ್ದರು.
ಯಶ್ ಕುಟುಂಬ ಮನೆ ಖಾಲಿ ಮಾಡಿದ ನಂತರ ಮನೆ ಬಾಗಿಲು ತೆರೆದು ನೋಡಿದಾಗ ಮಾಲೀಕರಿಗೆ ಶಾಕ್ ಎದುರಾಗಿದೆ. ಮನೆಯಲ್ಲಿನ ಕೆಲ ವಸ್ತುಗಳನ್ನು ಹೊಡೆದಿರುವುದು ಕಣ್ಣಿಗೆ ಕಾಣಿಸಿದೆ. ವಾರ್ಡ್ ರೋಬ್ ಬಾಗಿಲು, ಕಿಚನ್ ನಲ್ಲಿನ ಎಲ್ಲ ವಸ್ತುಗಳು, ಫಾರಿನ್ ಕಮೋಡ್ ಕೂಡ ಹೊಡೆದು ಹಾಕಿದ್ದಾರೆ ಎಂದು ಮನೆ ಮಾಲೀಕರು ಯಶ್ ವಿರುದ್ಧ ಆರೋಪಿಸಿದ್ದಾರೆ.
ಆದರೆ ಕೀ ಹಸ್ತಾಂತರದ ಸಂದರ್ಭದಲ್ಲಿ ಮನೆ ಓನರ್ ಯಾಕೆ ಮನೆಯನ್ನು ಪರಿಶೀಲನೆಗೆ ಒಳಪಡಿಸಿಲ್ಲ ಅನ್ನುವುದು ಸಾಕಷ್ಟು ಗುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಯಶ್ ಮನೆಬಿಡಲು ಹೇಳಿದಾಗ ಸಾಕಷ್ಟು ಬಾರಿ ಓನರ್ ಮಾತಿಗೆ ಕ್ಯಾರೇ ಅಂದಿರಲಿಲ್ಲ. ಇದೇ ದ್ವೇಷವನ್ನು ಇಟ್ಟುಕೊಂಡು ಯಶ್ ಮೇಲೆ ಕೆಟ್ಟ ಹೆಸರು ಬರುವ ಕೆಲಸ ಮಾಡ್ತಾ ಇದಾರಾ ಮುನಿ? ಎಲ್ಲದಕ್ಕೂ ಯಶ್ ಉತ್ತರಿಸಿಬೇಕು. ಯಶ್ ಈ ಸಂದರ್ಭದಲ್ಲಿ ಮಾತಾಡದೇ ಹೋದರೆ, ಸಮಾಜದ ಮುಂದೆ ಕುಬ್ಜರಾಗಿ ಬಿಡುತ್ತಾರೆ. ಬಿಕಾಸ್, ತಳಮಟ್ಟದಿಂದ ಬೆಳೆದು ನಿಂತ ಯಶ್ ಅಸಹನೆಯಿಂದ ಮನೆಯ ವಸ್ತುಗಳನ್ನು ದ್ವಂಸಗೊಳಿಸಿದ್ದಾರೆ ಅಂದರೆ ನಂಬುವುದು ಕಷ್ಟವಾದರೂ ಅದೇ ಸತ್ಯ ಎಂದಾಗುತ್ತದೆ.
Pingback: Rescue Tow Hampton VA