ಮಾಡೆಲ್ ಉರ್ಫಿ ಜಾವೇದ್ ಅವರಿಗೆ ವಾಟ್ಸ್ ಆಯಪ್‌ನಲ್ಲಿ ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನವೀನ್ ಗಿರಿ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ 354 ಎ (ಲೈಂಗಿಕ ಕಿರುಕುಳ) 354 ಡಿ (ಹಿಂಬಾಲಿಸುವಿಕೆ) , 509, 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಐಪಿಸಿಸಿ ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಲಾಗಿದೆ.
ವಾಟ್ಸ್ ಆಯಪ್ ಮೂಲಕ ಸೆಲೆಬ್ರಿಟಿಗಳು ಸೇರಿದಂತೆ ಹಲವರಿಗೆ ನವೀನ್ ಬೆದರಿಕೆ ಸಂದೇಶ ರವಾನಿಸುತ್ತಿದ್ದ. ಸದ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇತ್ತೀಚೆಗೆ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ಬಟ್ಟೆಗಳನ್ನು ಧರಿಸಿ ಚಿತ್ರೀಕರಣ ಮಾಡಿದ್ದಕ್ಕಾಗಿ ಚಿತ್ರೀಕರಣದ ನಂತರ ಉರ್ಫಿಯನ್ನು ದುಬೈನಲ್ಲಿ ಸ್ಥಳೀಯ ಪೊಲೀಸರು ಪ್ರಶ್ನಿಸಿ ಬಂಧಿಸಿದ್ದಾರೆ.
ವರದಿ ಹೇಳುವಂತೆ ಉರ್ಫಿ ಅವರು ಧರಿಸಿರುವ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಆಕೆ ವಿಡಿಯೊವನ್ನು ಸಾರ್ವಜನಿಕ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ದುಬೈ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
___

Be the first to comment