ಮುಗ್ಧ ಮುಖದ ಕರಾವಳಿ ಚೆಲುವೆ ಮೇಘಾಶೆಟ್ಟಿ

ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದ ಈ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟ ಅನಿರುದ್ಧ್​ಗೆ ಜೋಡಿಯಾಗಿ ಕಾಣಿಸಿಕೊಂಡ ಮುಗ್ಧ ಮುಖದ ಕರಾವಳಿ ಚೆಲುವೆ ಮೇಘಾಶೆಟ್ಟಿ ಸದ್ಯ ಕರ್ನಾಟಕ ಜನತೆಯ ಮನಗೆದ್ದು ಮನೆ ಮಗಳಾಗಿದ್ದಾರೆ. ಐಎಎಸ್​ ಕನಸು ಕಂಡವಳು ಈಗ ಕರ್ನಾಟಕದ ಕಿರುತೆರೆ ಸ್ಟಾರ್ ಆಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ ‘ಜೊತೆ ಜೊತೆಯಲಿ’ ಕಡಿಮೆ ಸಮಯದಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಆರೂರು ಜಗದೀಶ್ ನಿರ್ದೇಶನದ ಈ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟ ಅನಿರುದ್ಧ್ ನಾಯಕನಾಗಿ ನಟಿಸಿದ ಕೌಟುಂಬಿಕ ಕಥೆಯುಳ್ಳ ಮಧುರ ಪ್ರೇಮಕಾವ್ಯ ‘ಜೊತೆ ಜೊತೆಯಲಿ’

45 ವರ್ಷದ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ 20 ವರ್ಷದ ಮುದ್ದಾದ ಹುಡುಗಿ ಅನು ನಡುವಿನ ಪ್ರೇಮಕಥೆಯೇ ಈ ಧಾರಾವಾಹಿಯ ಜೀವಾಳ.ಅನಿರುದ್ಧ್​​​​​​​​​ಗೆ ಜೋಡಿಯಾಗಿ ನಟಿಸಿದ ಮೇಘಾಶೆಟ್ಟಿ ಸದ್ಯ ಕರ್ನಾಟಕ ಜನತೆಯ ಮನಗೆದ್ದು ಮನೆ ಮಗಳಾಗಿದ್ದಾಳೆ.

ಮೊದಲ ಧಾರಾವಾಹಿಯಲ್ಲೇ ಸ್ಟಾರ್​ ಪಟ್ಟ ಗಳಿಸಿವುದು ಅಷ್ಟು ಸುಲಭದ ಮಾತಲ್ಲ ಅದನ್ನು ಮೇಘಾಶೆಟ್ಟಿ ಸಾಧಿಸಿದ್ದಾರೆ  ಹೌದು ಮೇಘಾಶೆಟ್ಟಿಗೆ ಇದು ಮೊದಲ ಧಾರಾವಾಹಿ. ಇನ್ನೂ ಬಣ್ಣದ ಬದುಕಿನಲ್ಲಿ ಅಂಬೆಗಾಲಿಡುತ್ತಿರವ ಹಸುಗೂಸು

ಧಾರಾವಾಹಿಗೆ ಮೇಘಾ ಸಿಕ್ಕಿದ್ದರ ಹಿಂದಿದೆ ಒಂದು ಇಂಟ್ರಸ್ಟಿಂಗ್​ ಸ್ಟೋರಿಜೀ ಕನ್ನಡದ ರಾಘವೇಂದ್ರ ಹುಣಸೂರು ಅವರು ಮೇಘಾ ಅವರ ಫೋಟೋವನ್ನು ಇನ್ಸ್​​​​ಸ್ಟಾಗ್ರಾಂನಲ್ಲಿ ನೋಡಿ ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದರಂತೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!