ರಜನಿಕಾಂತ್ ನಟನೆಯ ‘ಜೈಲರ್ 2’ ಪ್ಯಾನ್-ಇಂಡಿಯನ್ ಚಿತ್ರದ ಮೂಲಕ ಮತ್ತೆನಟಿ ಮೇಘನಾ ರಾಜ್ ಸರ್ಜಾ ಕಾಲಿವುಡ್‌ಗೆ ರೀಎಂಟ್ರಿ ನೀಡುತ್ತಿದ್ದಾರೆ.
ಕಾದಲ್ ಸೊಲ್ಲ ವಂದೇನ್ (2010) ಮತ್ತು ಉಯರ್ತಿರು 420 (2011) ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮೇಘನಾ, ಜೈಲರ್ 2 ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಮೇಘನಾ ಈಗಾಗಲೇ ಕಳೆದ ಕೆಲವು ದಿನಗಳಿಂದ ಚಿತ್ರೀಕರಣದಲ್ಲಿದ್ದಾರೆ. ಅವರ ಪಾತ್ರದ ವಿವರಗಳು ಇನ್ನೂ ಗೌಪ್ಯವಾಗಿವೆ. ಮೇಘನಾ ರಾಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸನ್ ಪಿಕ್ಚರ್ಸ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಜೈಲರ್ 2 ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ಮಿರ್ನಾ ನಟಿಸಿದ್ದಾರೆ. ಶಿವ ರಾಜ್‌ಕುಮಾರ್ ಕೂಡ ಈ ಸೀಕ್ವೆಲ್‌ಗೆ ಮರಳಲಿದ್ದಾರೆ. ಮೊದಲ ಭಾಗದಲ್ಲಿ ನಟಿಸಿದ್ದ ಮೋಹನ್ ಲಾಲ್, ಎಸ್‌ಜೆ ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಮತ್ತು ಸಂತಾನಂ ಜೈಲರ್ 2 ಚಿತ್ರದಲ್ಲಿಇದ್ದಾರೆ.
ಮೇಘನಾ ತಮಿಳು ಚಿತ್ರ ‘ನಂದ ನಂದಿತ’ (2012) ದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.
ಮೇಘನಾ ರಾಜ್ ಸರ್ಜಾ ‘ಬುದ್ಧಿವಂತ 2’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
—-





Be the first to comment