Meghana Raj: ಮೇಘನಾ ರಾಜ್​ ಬರ್ತ್​ಡೇಗೆ ‘ತತ್ಸಮ ತದ್ಭವ’ ಪೋಸ್ಟರ್ ರಿಲೀಸ್‌

ಮೇಘನಾ ರಾಜ್ ಅವರು ಇಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದು, ಅವರ ಕಂಬ್ಯಾಕ್ ಸಿನಿಮಾ ‘ತತ್ಸಮ ತದ್ಭವ’ ದ ಹೊಸ ಪೋಸ್ಟರ್ ರಿವೀಲ್ ಆಗಿದೆ.

ಈ ಪೋಸ್ಟರ್​ನಲ್ಲಿ ಮೇಘನಾ ಅವರು ತೋಟದ ಮಧ್ಯೆ ಏನನ್ನೋ ಹುಡುಕುವಂತಿದೆ. ಅವರ ಕೈಯಲ್ಲಿ ಟಾರ್ಚ್​ ಇದೆ. ಈ ಸಿನಿಮಾ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬರುತ್ತಿದೆ. ಎರಡೂ ಭಾಷೆಯಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ.

‘ತತ್ಸಮ ತದ್ಭವ’ ಚಿತ್ರದಲ್ಲಿ ಮೇಘನಾ ವಿಶೇಷ ಪಾತ್ರ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಕೆಲವು ವರ್ಷಗಳಿಂದ ನಟಿ ಮೇಘನಾರಾಜ್ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಅವರು ಮರಳಿ ಚಿತ್ರರಂಗಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು.

‘ತತ್ಸಮ ತದ್ಭವ’ ಚಿತ್ರವನ್ನು ಮೇಘನಾ ಗೆಳೆಯ ಪನ್ನಗ ಭರಣ ನಿರ್ಮಾಣ ಮಾಡಿದ್ದಾರೆ. ಸ್ಫೂರ್ತಿ ಅನಿಲ್ ಪನ್ನಗ ಭರಣಗೆ ಸಾಥ್ ನೀಡಿದ್ದಾರೆ. ವಿಶಾಲ್ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಇದೆ. ಪ್ರಜ್ವಲ್ ದೇವರಾಜ್ ಸೇರಿ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಮೇಘನಾ ರಾಜ್ ಅವರ ಪತಿ ಚಿರಂಜೀವಿ ಸರ್ಜಾ 2020ರಲ್ಲಿ ಮೃತಪಟ್ಟರು.  ಈ ಸಾವನ್ನು ಯಾರೂ ಊಹಿಸಿರಲಿಲ್ಲ. ಇದಾದ ಬಳಿಕ ಮೇಘನಾ ರಾಜ್ ಅವರು ಚಿತ್ರರಂಗದಿಂದ ದೂರ ಉಳಿದರು. ಮಗು ರಾಯನ್ ರಾಜ್ ಸರ್ಜಾ ಜನಿಸಿದ ನಂತರ  ಅವರು ಈ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
—-

Be the first to comment

Leave a Reply

Your email address will not be published. Required fields are marked *

Translate »
error: Content is protected !!