ಚಿತ್ರ: ಮೇಘ
ನಿರ್ದೇಶನ: ಚರಣ್
ತಾರಾಗಣ: ಕಿರಣ್ ರಾಜ್, ಕಾಜಲ್ ಕುಂದರ್, ರಾಜೇಶ್ ನಟರಂಗ, ಶೋಭರಾಜ್ ಇತರರು
ರೇಟಿಂಗ್: 3.5
ತರುಣ ತರುಣಿಯರ ಪ್ರೇಮದ ನವಿರು ಭಾವ, ಪೋಷಕರ ಬುದ್ಧಿವಾದ, ಡ್ಯುಯೆಟ್ ಸಾಂಗ್, ಬಳಿಕ ವಿರಸ ಈ ರೀತಿಯ ಪ್ರೇಮದ ನವಿರು ಭಾವಗಳ ಚಿತ್ರ ಮೇಘ.
ಕೋಪದ ಯುವಕನಿಗೆ, ಆಗ ತಾನೆ ಬ್ರೇಕ್ ಅಪ್ ಆದ ಹುಡುಗಿಯ ಸ್ನೇಹ ಶುರುವಾಗುತ್ತದೆ. ಮುಂದೆ ಹುಡುಗಿಯ ಪೋಷಕರಿಂದ ನೀತಿ ಪಾಠ ಆಗುತ್ತದೆ. ನಡುವೆ ಒಂದಷ್ಟು ಟ್ವಿಸ್ಟ್ ಹಾಗೂ ಟರ್ನ್ ಗಳು ಬರುತ್ತವೆ. ಮುಂದೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರದಲ್ಲಿ ನಾಯಕ ಕಿರಣ್ ರಾಜ್ ಹಾಗೂ ನಾಯಕಿ ಕಾಜಲ್ ಕುಂದರ್ ಸೊಗಸಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ ಹಾಗೂ ಶೋಭರಾಜ್ ಚಿತ್ರಕ್ಕೆ ಜೀವ ತುಂಬಿದ್ದಾರೆ.
ಪ್ರೇಮದ ಕುರಿತು ಮಾತನಾಡುವ ಸಿನಿಮಾದಲ್ಲಿ ಒಂದಷ್ಟು ಜೀವನ ಪಾಠ ಕೂಡ ಇದೆ. ಒಳ್ಳೆಯ ಭಾವವನ್ನು ಚಿತ್ರವಾಗಿ ಮೇಘ ಮೂಡಿ ಬಂದಿದೆ ಎನ್ನಬಹುದು.
Be the first to comment