“ಮೇರನಾಮ್ ಪೂರಿಭಾಯ್”ಗೆ ಚಿತ್ರಕ್ಕೆ ಮುಹೂರ್ತ

ತುಮಕೂರಿನ ಪಿ.ಚಿರಂಜೀವ ನಾಯ್ಕ್ ಹೊಸ ಚಿತ್ರ ’ಮೇರನಾಮ್ ಪೂರಿಭಾಯ್’ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಬರುತ್ತಿರುವ ಕಾರಣ ಎಲ್ಲಾ ಭಾಷೆಗೆ ಹೊಂದಿಕೆಯಾಗುವಂತೆ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ಅಲ್ಲದೆ ಕಥೆಯು ಪ್ರಾರಂಭದಲ್ಲಿ ಮುಂಬೈದಲ್ಲಿ ನಡೆದು ತರುವಾಯ ಇಲ್ಲಿಗೆ ಬರುತ್ತದೆ.

ಬೇರೆ ಸಿನಿಮಾಗಳಲ್ಲಿ ಇಲ್ಲಿಂದ ಅಲ್ಲಿಗೆ ಹೋಗಿ ಡಾನ್ ಆಗುತ್ತಾರೆ. ಆದರೆ ನಮ್ಮ ಸಿನಿಮಾದಲ್ಲಿ ಮುಂಬೈನಿಂದ ಬಂದ ಹುಡುಗನೊಬ್ಬ ಕರ್ನಾಟಕದಲ್ಲಿ ರೌಡಿಯಾಗುತ್ರಾನೆ ಎನ್ನುವುದೇ ವಿಶೇಷ. ಮುಗ್ದನಾಗಿದ್ದ ಆತನು ಇಲ್ಲಿಗೆ ಬಂದ ಮೇಲೆ ರಗಡ್ ಆಗುತ್ತಾನೆ.

ಬೆಂಗಳೂರಿಗೆ ಬಂದು ಏನು ಮಾಡ್ತಾನೆ, ಹೇಗೆ ಬದಲಾವಣೆ ಗೊಳ್ತಾನೆ ಎಂಬುದನ್ನು ಹೇಳಲಾಗುತ್ತಿದೆ. ಒಟ್ಟಾರೆ ಮಾಸ್ ಕಮರ್ಷಿಯಲ್ ಸ್ಟೋರಿ ಇದಾಗಿದೆ. ಕಥೆಯು ಕನ್ನಡ, ಹಿಂದಿಯಲ್ಲಿ ನಡೆಯಲಿರುವುದರಿಂದ ಒಂದಷ್ಟು ಸಂಭಾಷಣೆಗಳು ಹಿಂದಿಯಲ್ಲಿ ಇರುತ್ತದೆ.

ಮಡಕೇರಿ, ಚಿಕ್ಕಮಗಳೂರು, ಹೆಚ್.ಡಿ.ಕೋಟೆ, ಹಿಮಾಲಯದಲ್ಲಿ ಚಿತ್ರೀಕರಣವನ್ನು ಎರಡು ಹಂತದಲ್ಲಿ ನಡೆಸಲು ಯೋಜನೆ ಹಾಕಲಾಗಿದೆ. ಎಂ.ಎಸ್.ಉಮೇಶ್, ರಮೇಶ್‌ಪಂಡಿತ್, ಪವಿತ್ರಾಲೋಕೇಶ್, ರಮೇಶ್‌ಭಟ್ ಮುಂತಾದವರು ನಟಿಸಲಿದ್ದಾರೆ ಎಂಬುದಾಗಿ ನಿರ್ದೇಶಕರು ಮಾಹಿತಿ ನಿಡಿದರು.

’ಐ1’ ನಟಿಸಿದ್ದು ಇದೇ ಎರಡನೇ ಅವಕಾಶ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗನಾಗಿ ಕಾಲೇಜಿಗೆ ಹೋಗುವ ಮುಗ್ದ, ಹೇಗೆ ಪ್ರೀತಿಯಲ್ಲಿ ಬೀಳುತ್ತಾನೆ. ಅದಾದ ಮೇಲೆ ರೌಡಿಸಂಗೆ ಹೇಗೆ ಕನೆಕ್ಟ್ ಆಗುತ್ತಾನೆ ಎನ್ನುವ ಪಾತ್ರವೆಂದು ನಾಯಕ ಕಿಶೋರ್ ಹೇಳಿಕೊಂಡರು.

ಕಾಲೇಜು ಹುಡುಗಿಯಾಗಿ ಬೆಳಗಾಂನ ವಿದ್ಯಾನಾಗಪ್ಪ ಪಾಟೀಲ್ ನಾಯಕಿಯಾಗಿ ಹೊಸ ಅನುಭವ. ಆರು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಪೈಕಿ ಎರಡು ಹಾಡುಗಳು ಸಿದ್ದಗೊಂಡಿದ್ದು ವಿಜಯಪ್ರಕಾಶ್, ರಾಜೇಶ್‌ಕೃಷ್ಣನ್ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಕೆ.ಸಿ.ಸಿದ್ದು ಅವರದಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!