ಮೀರಾ ಚೋಪ್ರಾ ಸೆಕ್ಷನ್ 375

ಮೀರಾ ಚೋಪ್ರಾ-ಪ್ರತಿಭಾವಂತ ನಟಿ. ತಮಿಳು, ತೆಲುಗು, ಇಂಗ್ಲೀಷ್ ಮತ್ತು ಹಿಂದಿ ಸಿನಿಮಾಗಳಲ್ಲಿ ತಮ್ಮ ಅಭಿನಯ ಸಾಮಥ್ರ್ಯವನ್ನು ಸಾಬೀತು ಮಾಡಿದ್ದಾಳೆ. ಮಾಜಿ ಭುವನ ಸುಂದರಿ-ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತು ಸ್ಮೈಲ್ ಬ್ಯೂಟಿ ಪರಿಣೀತಿ ಚೋಪ್ರಾ ಈಕೆಗೆ ನಿಕಟ ಸಂಬಂಧಿ. ಇಬ್ಬರು ಖ್ಯಾತ ತಾರೆಯರು ಚಿತ್ರೋದ್ಯಮದಲ್ಲಿದ್ದರೂ ಅವರ ನೆರಳಿಲ್ಲದೇ ಬೆಳೆದ ಪ್ರತಿಭಾನ್ವಿತ ಬೆಡಗಿ ಈಕೆ.

ಮೀರಾ ಚೋಪ್ರಾ ಅಭಿನಯದ ಸೆಕ್ಷನ್ 375 ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದಲ್ಲಿ ಮೀರಾ ರೇಪ್ ವಿಕ್ಟಿಮ್ (ಅತ್ಯಾಚಾರ ಸಂತ್ರಸ್ತೆ) ಪಾತ್ರ ನಿರ್ವಹಿಸಿದ್ಧಾಳೆ. ತನ್ನ ಪಾತ್ರ ಮತ್ತು ಸೆಕ್ಷನ್ 375 ಸಿನಿಮಾ ಬಗ್ಗೆ ಮೀರಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾಳೆ.

ಸೆಕ್ಷನ್ 375 ಸಿನಿಮಾ ನನಗೆ ಮತ್ತು ನನ್ನ ವೃತ್ತಿ ಬದುಕಿಗೆ ಜೀವನ ಪರಿವರ್ತನೆಯ ಅನುಭವ ನೀಡಿದೆ. ಈ ಚಿತ್ರದಲ್ಲಿ ನನ್ನದು ರೇಪ್ ವಿಕ್ಟಿಮ್ ಪಾತ್ರ. ಈ ಪಾತ್ರ ಮಾಡುವುದು ಕಷ್ಟ ಮತ್ತು ತುಂಬಾ ಭಾವೋದ್ವೇಗವಾದುದು. ಈ ಪಾತ್ರ ನಿರ್ವಹಿಸಲು ನನಗೆ ತುಂಬಾ ಕಷ್ಟವಾಯಿತು. ಪ್ರತಿ ಸನ್ನಿವೇಶದ ಶೂಟಿಂಗ್‍ನಲ್ಲಿ ಈ ಪಾತ್ರ ನನಗೆ ಒಂದು ರೀತಿಯ ಯಾತನೆಯಂತಾಗಿತ್ತು.

ಅತ್ಯಾಚಾರ ಸಂತ್ರಸ್ತೆಯ ಪಾತ್ರ ಮಾಡಿದ ನನಗೇ ಈ ರೀತಿ ಆಗಿರುವಾಗ, ರೇಪ್‍ಗೆ ಒಳಗಾದ ಸಂತ್ರಸ್ತೆಯರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ನೀವೇ ಊಹಿಸಿ. ಶೂಟಿಂಗ್ ಮುಗಿದ ಮೇಲೆ ಇದರಿಂದ ಹೊರಬರಲು ನನಗೆ ಕೆಲ ಸಮಯವೇ ಬೇಕಾಯಿತು. ಸೆಕ್ಷನ್ 375 ಅತ್ಯಾಚಾರ ಮತ್ತು ಅತ್ಯಾಚಾರ ಸಂತ್ರಸ್ತೆ ಕುರಿತ ಸಿನಿಮಾ. ಪ್ರಭಾವಿ ಸಿನಿಮಾ ನಿರ್ಮಾಪಕನಿಂದ ಅತ್ಯಾಚಾರಕ್ಕೆ ಒಳಗಾಗುವ ಯುವತಿ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ನ್ಯಾಯಕ್ಕಾಗಿ ಹೋರಾ ಡಲು ಮಹಿಳೆಯರಿಗೆ ಈ ಸಿನಿಮಾ ಶಕ್ತಿ ನೀಡುತ್ತದೆ. ಇದೊಂದು ರೀತಿ ಮಹಿಳಾ ಸಬಲೀಕರಣದ ಚಿತ್ರ ಎನ್ನುತ್ತಾರೆ ಮೀರಾ.

ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 375 ಕುರಿತ ಸಿನಿಮಾ. ಈ ಚಿತ್ರದಲ್ಲಿ ರಿಚಾ ಛಡ್ಡಾ ಸರ್ಕಾರಿ ಆಭಿಯೋಜಕಿ (ಪಬ್ಲಿಕ್ ಪ್ರಾಸಿಕ್ಯೂಟರ್-ಪಿಪಿ) ಪಾತ್ರ ನಿರ್ವಹಿಸಿದ್ಧಾಳೆ. ರಾಹುಲ್ ಭಟ್ ಮತ್ತು ಅಕ್ಷಯ್ ಖನ್ನಾ ಈ ಚಿತ್ರದಲ್ಲಿದ್ದಾರೆ. ಕುಮಾರ್ ಮಂಗಲ್ ಪಠಾಕ್ ನಿರ್ಮಿಸಿರುವ ಈ ಚಿತ್ರವನ್ನು ಅಜಯ್ ಬಾಲ್ ನಿರ್ದೇಶಿಸಿದ್ದಾರೆ. ಕೋರ್ಟ್‍ರೂಂ ಡ್ರಾಮಾ ಸೆಪ್ಟೆಂಬರ್ 13ರಂದು ತೆರೆ ಕಾಣಲಿದೆ.

This Article Has 2 Comments
  1. Pingback: Lakeland Tow Truck

  2. Pingback: ادرس جدید بت فوروارد

Leave a Reply

Your email address will not be published. Required fields are marked *

Translate »
error: Content is protected !!