ಸಿ

‘C’ Movie Review: ಮೆಡಿಕಲ್ ಮಾಫಿಯಾದ ಅನಾವರಣ ‘ಸಿ’

ಚಿತ್ರ: ಸಿ
ನಿರ್ದೇಶನ: ಕಿರಣ್ ಸುಬ್ರಮಣಿ
ತಾರಾಗಣ: ಕಿರಣ್ ಸುಬ್ರಮಣಿ, ಸಾನ್ವಿಕ, ಮಜಾ ಭಾರತ್ ಪಾಟೀಲ್, ಆರ್ಯ
ರೇಟಿಂಗ್: 3.5

ಮಗಳಿಗೆ ದೃಷ್ಟಿ ಬರುವಂತೆ ಮಾಡಲು ಮೆಡಿಕಲ್ ಮಾಫಿಯಾದ ಪ್ರಯೋಗಕ್ಕೆ ಒಪ್ಪಿಕೊಳ್ಳುವ ತಂದೆ ಯಾವ ರೀತಿಯ ಸಮಸ್ಯೆಗೆ ಒಡ್ಡಿಕೊಳ್ಳುತ್ತಾನೆ ಎನ್ನುವುದು ಹೊಸ ಚಿತ್ರ ಸಿ ಯ ಒನ್ ಲೈನ್ ಸ್ಟೋರಿ.

ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ತಂದೆಗೆ, ಆಕಸ್ಮಿಕವಾಗಿ ದೃಷ್ಟಿ ಕಳೆದುಕೊಂಡ ಮಗಳಿಗೆ ಕಣ್ಣಿನ ಚಿಕಿತ್ಸೆಗೆ 15 ಲಕ್ಷ ರೂಪಾಯಿ ಬೇಕಾಗುತ್ತದೆ. ಆತ ಸ್ನೇಹಿತ ಹೇಳಿದಂತೆ ಮೆಡಿಕಲ್ ಪ್ರಯೋಗಕ್ಕೆ ಒಳಗಾಗಿ ಅದರಿಂದ ಬಂದ ಹಣದಿಂದ ಮಗಳಿಗೆ ಚಿಕಿತ್ಸೆ ಕೊಡಲು ಮುಂದಾಗುತ್ತಾನೆ. ಆದರೆ ಆಗ ಅವನಿಗೆ ಆಘಾತ ಎದುರಾಗುತ್ತದೆ. ಆ ವ್ಯಕ್ತಿ ಮೆಡಿಕಲ್ ಪ್ರಯೋಗದಿಂದ ತಪ್ಪಿಸಿಕೊಳ್ಳುತ್ತಾನೆಯೇ? ಮಗಳಿಗೆ ದೃಷ್ಟಿ ತರುವಲ್ಲಿ ಯಶಸ್ವಿಯಾಗುತ್ತಾನೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಇದು ಎಮೋಷನ್ ನಿಂದ ಕೂಡಿದ ಚಿತ್ರ. ತಂದೆ ಮತ್ತು ಮಗಳ ಭಾವಕ ಸನ್ನಿವೇಶಗಳು ಪ್ರೇಕ್ಷಕನ ಮನಸ್ಸನ್ನು ಮುಟ್ಟುತ್ತದೆ. ಭಾವುಕತೆಯ ಜೊತೆಗೆ ಇಲ್ಲಿ ಕ್ರೈಂ ಕೂಡ ಇದೆ. ಕ್ರೈಂ ಗೆ ಅಸಹಾಯಕ ವ್ಯಕ್ತಿ ಸಿಲುಕಿದಾಗ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ನಿರ್ದೇಶಕರು ವೈಭವಿಕರಣ ಇಲ್ಲದೆ ಸಾಧಾರಣ ದೃಶ್ಯಗಳ ಮೂಲಕ ನಿರೂಪಿಸಿದ್ದಾರೆ.

ಚಿತ್ರದಲ್ಲಿ ನಿರ್ದೇಶನ ಹಾಗೂ ನಟನೆ ಎರಡು ವಿಭಾಗಗಳನ್ನು ಹೊತ್ತು ಕೊಂಡಿರುವ ಕಿರಣ್ ಸುಬ್ರಮಣಿ ಅವರು ಮೆಡಿಕಲ್ ಮಾಫಿಯಾದ ಬುಡ ಅಲುಗಾಡಿಸುವ ತಂದೆಯ ಪಾತ್ರವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ಭಾವುಕತೆ ಹಾಗೂ ಮೆಡಿಕಲ್ ಮಾಫಿಯಾ ಅನಾವರಣ ಮಾಡುವ ಚಿತ್ರವಾಗಿ ಸಿ ಗಮನ ಸೆಳೆಯುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!