MeToo

ಮಾಲಿವುಡ್: 17 ಲೈಂಗಿಕ ಕಿರುಕುಳ ಪ್ರಕರಣ ಬಹಿರಂಗ

ಮಲಯಾಳಂ ಚಿತ್ರರಂಗ ನಟಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಮೀಟೂ ಪ್ರಕರಣದಿಂದ  ತತ್ತರಿಸಿದ್ದು, ಬಹಿರಂಗ ಆದ 17 ಪ್ರಕರಣಗಳ ತನಿಖೆ ನಡೆಯಲಿದೆ.

ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಮೋಹನ್ ಲಾಲ್ ನೇತೃತ್ವದ ಕಲಾವಿದ ಸಂಘದ (ಅಮ್ಮಾ) ಆಡಳಿತ ಮಂಡಳಿ ವಿಸರ್ಜಿಸಲಾಗಿದೆ. ಅಲ್ಲದೇ ಸ್ಟಾರ್ ನಟರಿಂದ ಹಿಡಿದು ನಿರ್ಮಾಪಕ ಮತ್ತು ನಿರ್ದೇಶಕರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ಈವರೆಗೂ 17 #MeeToo ಪ್ರಕರಣಗಳು ಬಹಿರಂಗವಾಗಿದ್ದು, ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆಗಳು ಬರುತ್ತಿವೆ ಎಂದು ನಟಿಯರು ಆರೋಪಿಸಿದ್ದಾರೆ.

ನಟಿ ಸೋನಿಯಾ ಮಲ್ಹಾರ್ , ನಟನೋರ್ವ 2013 ರಲ್ಲಿ ಸಿನಿಮಾ ಸೆಟ್ ನಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಎಸ್ ಐಟಿಗೆ ದೂರು ನೀಡಿದ್ದಾರೆ. ಇದೇ ವೇಳೆ ಸೋನಿಯಾ ಮಲ್ಹಾರ್ ತಮ್ಮ ಆರೋಪಗಳಿಗೂ ನಟ ಜಯಸೂರ್ಯಗೂ ಸಂಬಂಧ ಕಲ್ಪಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. #MeToo ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಕೇರಳ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ಮಲಯಾಳಂ ನಟ ಸಿದ್ದೀಕ್‌ ಅವರು 2016ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಆರೋಪಿಸಿದ ಹಿನ್ನೆಲೆಯಲ್ಲಿ ಸಿದ್ದೀಕ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟಿ ಮೀನು ಮುನೀರ್ 2013ರ ಚಿತ್ರೀಕರಣದ ವೇಳೆ ಮುಖೇಶ್, ಜಯಸೂರ್ಯ, ಮುನಿಯಪ್ಪಿಲ್ಲಾ ರಾಜು ಮತ್ತು ಇಡವೆಲ್ಲಾ ಬಾಬು ಸಿನಿಮಾ ಶೂಟಿಂಗ್ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದೀಗ ಬೆದರಿಕೆ ಮೆಸೇಜ್ ಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಹಿರಿಯ ನಟ ಹಾಗೂ ಸಿಪಿಎಂ ಶಾಸಕ ಮುಖೇಶ್ ಅವರನ್ನು ರಾಜ್ಯ ಸರ್ಕಾರದ ಸಿನಿಮಾ ನೀತಿ ಸಂಹಿತೆ ರಚನಾ ಸಂಸ್ಥೆಯಿಂದ ವಜಾ ಮಾಡಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!