ಮಲಯಾಳಿ ಗಾಯಕ ಮಧು ಬಾಲಕೃಷ್ಣ ಅಂದರೆ ಹೆಚ್ಚಿನವರಿಗೆ ಗೊತ್ತಾಗಲಿಕ್ಕಿಲ್ಲ, ಅದೇ `ಆಪ್ತಮಿತ್ರ’ ಚಿತ್ರದ `ಕಣಕಣದೆ ಶಾರದೆ.. ಕಲೆತಿಹಳು ಕಾಣದೆ..’ ಎಂಬ ಸೂಪರ್ ಹಿಟ್ ಗೀತೆಯ ಗಾಯಕ ಅಂದರೆ ಗೊತ್ತಾಗಿಬಿಡತ್ತದೆ. ರಾಜಮೌಳಿ ನಿರ್ದೇಶನದ `ಬಾಹುಬಲಿ’ ಚಿತ್ರದ ಬಹುಮುಖ್ಯ ಗಾಯಕ ಇದೇ ಮಧು ಬಾಲಕೃಷ್ಣನ್. ಮೂಲತಃ ಮಲಯಾಳಿಯಾದರೂ ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಿಗೂ ಬಹುಬೇಡಿಕೆಯ ಹಾಡುಗಾರ. ಕನ್ನಡದಲ್ಲಿ ಇವರು ಸಾಕಷ್ಟು ಚಿತ್ರಗಳಲ್ಲಿ ಹಾಡಿದ್ದಾರೆ. ಅಂಬರೀಶ, ಸಿಂಹಾದ್ರಿ, ಬಂಧು ಬಳಗ, ಅರಮನೆ, ಅನಾಥರು, ಚಂಡ, ಮನ್ಮಥ, ದತ್ತ, ತಂಗಿಗಾಗಿ, ತವರಿನಸಿರಿ, ಗಂಡುಗಲಿ ಕುಮಾರರಾಮ, ಕೇರ್ ಆಫ್ ಫುಟ್ಪಾತ್, ಅಣ್ಣತಂಗಿ, ನಂಜುಂಡಿ, ತವರಿಗೆ ಬಾ ತಂಗಿ
..ಹೀಗೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಹಾಡಿದ್ದಾರೆ. ಹಾಡುತ್ತಲೇ ಇದ್ದಾರೆ. ಇವರ ಬಗ್ಗೆ ಇಷ್ಟೊಂದು ಇಂಟ್ರಡಕ್ಷನ್ ಕೊಡೋದಿಕ್ಕೆ ಕಾರಣ `ಮಾಯಾವಿ’! ಹೌದು ಪತ್ರಕರ್ತರಾಗಿ ಈಗ ಚಿತ್ರನಿರ್ದೇಶಕರಾಗಿರುವ ಬಿ.ನವೀನ್ಕೃಷ್ಣ ನಿರ್ದೇಶನದ `ಮೇಲೊಬ್ಬ ಮಾಯಾವಿ’ ಚಿತ್ರಕ್ಕೂ ಇವರು ಇತ್ತೀಚೆಗೆ ಹಾಡಿದ್ದಾರೆ. ಈ ವಿಶೇಷ ಥೀಮ್ಸಾಂಗ್ಗೆ ಪತ್ರಕರ್ತ/ನಿರ್ದೇಶಕ/ನಟ ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯವಿದೆ. ಗಾನ ಗಾರುಡಿಗ ಎಲ್.ಎನ್.ಶಾಸ್ರೀ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ `ಜಗದ ಜೀವಿಗಳಿಗೆ ಚಾವಿ ಹಾಕಿ ಕುಂತವ್ನೆ..ಮೇಲೊಬ್ಬ ಮಾಯಾವಿ..’ ಅನ್ನುವ ಗೀತೆ ಸಧ್ಯದಲ್ಲೇ ಬಿಡುಗಡೆಯಾಗಲಿದೆ.
Pingback: Unicc