ಮಾಯಾ ಕನ್ನಡಿ’ ಚಿತ್ರದ ಟೀಸರ್ ಬಿಡುಗಡೆ

SIFORIA PICTURES  ಲಾಂಛನದಲ್ಲಿ ಸಪ್ನಾ ಪಾಟೀಲ್ ಅವರು ನಿರ್ಮಿಸಿರುವ `ಮಾಯಾ ಕನ್ನಡಿ` ಚಿತ್ರದ ಟೀಸರ್ ಯೂಟ್ಯೂಬ್‍ನಲ್ಲಿ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆನಂದ್ ಆಡಿಯೋದವರು ಈ ಚಿತ್ರದ ಹಾಡು ಮತ್ತು ವಿಡಿಯೊ ಹಕ್ಕುಗಳನ್ನು ಪಡೆದಿದ್ದಾರೆ. ಒಂದು ನಿಮಿಷದ ಈ ಟೀಸರ್‍ನಲ್ಲಿ ನಟ ಕೆ.ಎಸ್.ಶ್ರೀಧರ್ ಅವರ ಒಂದು ಸಂಭಾಷಣೆ ಇದೆ.

ವಿನೋದ್ ಪೂಜಾರಿ ಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಎಸ್.ಎನ್ ಸಂಗೀತ ನೀದಿದ್ದಾರೆ. ಆನಂದ್ ರಾಜವಿಕ್ರಂ ಹಿನ್ನಲ್ಲೆ ಸಂಗೀತ ನಿರ್ದೇಶನ, ಮಣಿ ಕುಕಲ್ ನಾಯರ್ ಛಾಯಾಗ್ರಹಣ ಹಾಗೂ ಸುಜೀತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿದೆ. ಕಿಂಗ್ ಆ¥sóï ಹಾರ್ಟ್ಸ್ ಎಂಟರ್‍ಟೈನ್ಸ್ ಅವರ ಸಹ ನಿರ್ಮಾಣವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ರಂಜಿತ್ ಬಜ್ಪೆ.
ಪ್ರಭು ಮುಂಡ್ಕುರು, ಕೆ.ಎಸ್.ಶ್ರೀಧರ್, ಕಾಜಲ್ ಕುಂದರ್, ಅನ್ವಿತ ಸಾಗರ್, ಅನೂಪ್ ಸಾಗರ್, ಅಶ್ವಿರಾವ್ ಪಲ್ಲಕ್ಕಿ, ಕಾರ್ತಿಕ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!