ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡ ಹೆಗ್ಗಳಿಕೆಯೂ ಇದೆ. ಇದೀಗ ಪ್ರೇಕ್ಷಕನ ಕುತೂಹಲ ತಣಿಸಲು ಚಿತ್ರ ಮಂದಿರಗಳಿಗೆ ಲಗ್ಗೆ ಇಡುತ್ತಿದೆ. ಅದೇ ‘ದಾರಿ ಯಾವುದಯ್ಯ ವೈಕುಂಠ ಕ್ಕೆ’. ಪೂರ್ವಜರಿಂದ ಹಿಡಿದು ಸಮಕಾಲೀನರು ಇದೇ ಪ್ರಶ್ನೆ ಮಾಡುವುದು ಸಹಜ. ಅದು ಮುಕ್ತಿಗೆ ಕೋರಿದ ದಾರಿ. ಇಲ್ಲಿ ಈ ಕುತೂಹಲ ಅಥವಾ ಪ್ರಶ್ನೆಯನ್ನು ಹಾಸ್ಯಕ್ಕೆ ಬಳಸಿಕೊಳ್ಳಲಾಗಿದೆ.
ಮೇ 20 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ. ವಿಶೇಷವೆಂದರೆ ಸ್ಕೈಲೈನ್ ದಿಲೀಪ್ ಕುಮಾರ್ ಈ ಚಿತ್ರವನ್ನು ಬಿಡುಗಡೆ (ವಿತರಣೆ) ಮಾಡುತ್ತಿದ್ದಾರೆ.ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವು ಬಿಡುಗಡೆ ಕಾಣುತ್ತಿದೆ.
ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ಇನ್ಪ್ಯಾಂಟ್ ಸಿನಿ ಕ್ರಿಯೇಷನ್ಸ್ ಅರ್ಪಿಸುವ ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಚಿತ್ರವನ್ನು ಶರಣಪ್ಪ ಎಂ.ಕೊಟಗಿ ನಿರ್ಮಿಸಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ (2021-22) ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ‘ಅತ್ಯುತ್ತಮ ಕನ್ನಡ ಚಿತ್ರ’ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡ ಚಿತ್ರ ಇದಾಗಿದೆ ಎಂಬುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವೂ ಆಗಿದೆ.
ಅಲ್ಲದೆ ಮಲೇಷ್ಯಾ, ಜರ್ಮನಿ, ಬಾಂಗ್ಲಾದೇಶ, ಲಂಡನ್, ಸ್ಪೇನ್,ಅಮೆರಿಕಾ, ಇಟಲಿ, ಸಿಂಗಾಪುರ್, ಔರಂಗಾಬಾದ್, ಕಲ್ಕತ್ತಾ, ಮಹಾರಾಷ್ಟ್ರ, ಕೇರಳ, ಬಿಹಾರ್, ರಾಜಸ್ಥಾನ್, ಕಾಶೀ, ದೆಹಲಿ, ಹೈದರಾಬಾದ್ ಇನ್ನೂ ಮುಂತಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಸುಮಾರುನೂರೈವತ್ತಕ್ಕೂ (150+) ಹೆಚ್ಚು ಪ್ರಶಸ್ತಿಯನ್ನು ಪಡೆದು ಕೊಂಡ ಹೆಗ್ಗಳಿಕೆಯೂ ಇದೆ.
ತಿಥಿ ಚಿತ್ರದಲ್ಲಿ ನಟಿಸಿದ್ದ ರಾಜ್ಯಪ್ರಶಸ್ತಿ ವಿಜೇತೆ ಪೂಜಾ ಇರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ವರ್ಧನ್, ಬಲ ರಾಜ್ವಾಡಿ, ಅನುಷಾ, ಶೀಬಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ, ಸುಚಿತ್, ಸುಧಾ, ಪ್ರಣಯ ಮೂರ್ತಿ, ಸಿದ್ದಾರ್ಥ್, ಗೌಡಿ, ಡಿ.ವಿ ನಾಗರಾಜ್, ಸಂಗೀತ, ಪ್ರಶಾಂತ್ ರಾವ್ ವರ್ಕು, ದಯಾನಂದ್, ಶಶಿಧರ್, ಸುರಂಜನ್, ಮಹೇಶ, ಅರುಣ್ ನಾಯಂಡಹಳ್ಳಿ, ಶಿವು ರಾಮನಗರ, ಇನ್ನೂ ಸಾಕಷ್ಟು ಕಲಾವಿದರ ತಾರಾಗಣವಿದೆ.
ಸಿದ್ದು ಪೂರ್ಣಚಂದ್ರ ಇದರ ನಿರ್ದೇಶಕರು. ಲೋಕಿ ಸಂಗೀತ
ರಾಜ್ ಭಾಸ್ಕರ್ ಶಬ್ದ ವಿನ್ಯಾಸ, ನಿತಿನ್ ಅಪ್ಪಿ ಛಾಯಾಗ್ರಹಣವಿದೆ.
Be the first to comment