‘ಮ್ಯಾಕ್ಸ್’ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿರುವ ಕಾರಣ ಸುದೀಪ್, ‘ಮ್ಯಾಕ್ಸ್’ ಚಿತ್ರತಂಡದೊಂದಿಗೆ ಸೆಲೆಬ್ರೇಷನ್ ಮಾಡಿದ್ದಾರೆ.
ಸೈಲೆಂಟ್ ಆಗಿ ರಿಲೀಸ್ ಆದ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ ಮೊದಲ ದಿನ ಸುದೀಪ್ ಮನೆಯಲ್ಲಿ ‘ಮ್ಯಾಕ್ಸ್’ ತಂಡಕ್ಕೆ ಪ್ರತ್ಯೇಕ ಪಾರ್ಟಿ ಕೊಟ್ಟಿದ್ದಾರೆ.
ಚಿತ್ರತಂಡದ ಜೊತೆಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಪಾರ್ಟಿಗೆ ಹಾಜರಾಗಿದ್ದ ಎಲ್ಲರೂ ‘ಮ್ಯಾಕ್ಸ್’ ಹೆಸರಿನ ಟಿ-ಶರ್ಟ್ಗಳನ್ನು ಧರಿಸಿ ಸೆಲೆಬ್ರೇಟ್ ಮಾಡಿದ್ದಾರೆ.
ಪಾರ್ಟಿಯ ಚಿತ್ರಗಳು ವಿಡಿಯೋಗಳು ವೈರಲ್ ಆಗುತ್ತಿದ್ದು, ಸುದೀಪ್ ಅಭಿಮಾನಿಗಳು ‘ಮ್ಯಾಕ್ಸ್’ ಪಾರ್ಟಿಯ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯಾಗಿದೆ. ಸುದೀಪ್ ನಟನೆ ಬಹಳ ಚೆನ್ನಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಆಕ್ಷನ್, ಸಂಗೀತದ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಕೆಆರ್ಜಿ ವಿತರಣೆ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಸುದೀಪ್ ಜೊತೆಗೆ ಉಗ್ರಂ ಮಂಜು, ಸುಕೃತ ವಾಗ್ಲೆ, ಸಂಯುಕ್ತ ಹೊರನಾಡು ಮುಂತಾದವರು ನಟಿಸಿದ್ದಾರೆ.
Be the first to comment