Max Movie : ಸರ್ಪ್ರೈಸ್‌ ಕೊಡಲಿದ್ದಾರೆ ಕಿಚ್ಚ ಸುದೀಪ್!

ಸೆಪ್ಟೆಂಬರ್ 2ರಂದು 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ್ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ.  ಅಂದು ಸುದೀಪ್  ಬಹುನಿರೀಕ್ಷಿತ ‘ಮ್ಯಾಕ್ಸ್‌’ ಸಿನಿಮಾ ರಿಲೀಸ್ ಡೇಟ್ ನ್ನು ಅನೌನ್ಸ್ ಮಾಡಲಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್ ಅವರ ನಟನೆಯ ಸಿನಿಮಾಗಾಗಿ ಕಾಯುತ್ತಿರುವ  ಅಭಿಮಾನಿಗಳು ಅವರನ್ನು ದೊಡ್ಡ ಪರದೆ ಮೇಲೆ ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ‘ಮ್ಯಾಕ್ಸ್‌’ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಆಕ್ಷನ್ ಸಿನಿಮಾ ಆಗಿದ್ದು, ಸುದೀಪ್ ಅವರನ್ನು ಮಾಸ್ ಅವತಾರದಲ್ಲಿ ನೋಡಬಯಸುವ ಅಭಿಮಾನಿಗಳಿಗೆ ಟೀಸರ್‌ನ ಆಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿದೆ.

‘ಮ್ಯಾಕ್ಸ್’ ಸಿನಿಮಾದ ಸಂಪೂರ್ಣ ಚಿತ್ರೀಕರಣ ತಮಿಳುನಾಡಿನ ಮಹಾಬಲಿಪುರಂ ಬಳಿ ಹಾಕಿದ್ದ ಬೃಹತ್ ಸೆಟ್‌ನಲ್ಲಿ ನಡೆದಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಮೂಡಿಬರಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಸಿನಿಮಾದಲ್ಲಿ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, ‘ಕಾಲಕೇಯ’ ಪ್ರಭಾಕರ್, ಪ್ರಮೊದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಮುಂತಾದವರು ನಟಿಸಿದ್ದಾರೆ.

 ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಸಖತ್ ಹೈಲೈಟ್ ಆಗಿದೆ. ಕಲೈಪುಲಿ ಎಸ್ ತನು ಅವರ ವಿ‌ ಕ್ರಿಯೇಷನ್ಸ್ ಹಾಗೂ ‘ಕಿಚ್ಚ’ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ  ಸಿನಿಮಾ ನಿರ್ಮಾಣವಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!