‘ಮ್ಯಾಕ್ಸ್’ ರಿಲೀಸ್ ಡೇಟ್ ಮಾಹಿತಿ

‘ಮ್ಯಾಕ್ಸ್’ ಚಿತ್ರವನ್ನು ಸೆಪ್ಟೆಂಬರ್ ವೇಳೆಗೆ ಕಣ್ತುಂಬಿಕೊಳ್ಳಬಹುದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

”ಮ್ಯಾಕ್ಸ್’ ಚಿತ್ರದ ಡಬ್ಬಿಂಗ್ ಕೆಲಸ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆಗಸ್ಟ್​ನಲ್ಲಿ ಸಿನಿಮಾ ಬರಬಹುದು ಅಂದುಕೊಂಡಿದ್ದೇವೆ. ಕೆಲಸ ಸ್ವಲ್ಪ ವಿಳಂಬ ಆದರೂ ಸೆಪ್ಟೆಂಬರ್ ವೇಳೆಗೆ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು” ಎಂದು ಸುದೀಪ್ ಹೇಳಿದ್ದಾರೆ.

‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್, ವರಲಕ್ಷ್ಮಿ ಶರತ್​ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಘ್ಲೆ, ಪ್ರಮೋದ್ ಶೆಟ್ಟಿ, ಇಳವರಸು ಮೊದಲಾದವರು ನಟಿಸಿದ್ದಾರೆ. ಕಲೈಪುಲಿ ಎಸ್​. ಧನು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.

‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಅವರು ಒಂದು ಬ್ರೇಕ್ ಪಡೆದಿದ್ದರು.  ಅವರ ಸಿನಿಮಾ ತೆರೆಮೇಲೆ ಬರದೆ ಎರಡು ವರ್ಷಗಳು ಕಳೆದಿವೆ.   ಇತ್ತೀಚೆಗೆ ಸುದೀಪ್ ಮಾಧ್ಯಮದ ಮುಂದೆ ಬಂದಿರಲಿಲ್ಲ. ಆದರೆ  ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಲಾಂಚ್​ಗೆ ಆಗಮಿಸಿದ್ದ ಸುದೀಪ್ ‘ ಮ್ಯಾಕ್ಸ್’ ಸಿನಿಮಾದ ಕುರಿತು ಮಾಹಿತಿ ನೀಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!