ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಇಂದು ಬೆಳಗ್ಗೆ 7 ಗಂಟೆಗೆ ರಾಜ್ಯದ 250ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ.
ಸುದೀಪ್ ಅಭಿಮಾನಿಗಳಿಗೆ ಕ್ರಿಸ್ಮಸ್ ಹಬ್ಬದ ಜೊತೆಗೆ ಮ್ಯಾಕ್ಸ್ ರಿಲೀಸ್ ಸಂತಸ ತಂದಿದೆ. ಎರಡೂವರೆ ವರ್ಷಗಳ ಬಳಿಕ ತೆರೆ ಮೇಲೆ ಸುದೀಪ್ ಕಣ್ತುಂಬಿಕೊಂಡು ಫ್ಯಾನ್ಸ್ ಖುಷ್ ಆಗಿದ್ದಾರೆ.
ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಮ್ಯಾಕ್ಸ್ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ತನು ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಕೆಆರ್ಜಿ ವಿತರಣೆ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಸುದೀಪ್ ಅವರ ಜೊತೆಗೆ ಉಗ್ರಂ ಮಂಜು, ಸುಕೃತ ವಾಗ್ಲೆ, ಸಂಯುಕ್ತ ಹೊರನಾಡು ಮುಂತಾದವರು ನಟಿಸಿದ್ದಾರೆ.
ಮ್ಯಾಕ್ಸ್ ಸಿನಿಮಾ ಟಿಕೆಟ್ ಭಾರೀ ಸಂಖ್ಯೆಯಲ್ಲಿ ಸೋಲ್ಡ್ ಆಗಿದೆ. ಕಿಚ್ಚ ಸುದೀಪ್ ಥಿಯೇಟರ್ನಲ್ಲಿ ಸಿಗೋಣ ಎಂಬ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮ್ಯಾಕ್ಸ್ ಸಿನಿಮಾ ನೋಡಲು ನರ್ತಕಿ ಥಿಯೇಟರ್ಗೆ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಆಗಮಿಸಿದ್ದಾರೆ.
Be the first to comment