Mavu bevu: ಏಪ್ರಿಲ್ 21ರಂದು ʼಮಾವು ಬೇವು’ ಬಿಡುಗಡೆ

ಸುಚೇಂದ್ರ ಪ್ರಸಾದ್ ನಿರ್ದೇಶನದ ʼಮಾವು ಬೇವು’ ಏಪ್ರಿಲ್ 21ರಂದು ಬಿಡುಗಡೆಗೊಳ್ಳಲಿದೆ.

ಸಂಬಂಧಗಳು, ಅದರ ಮೌಲ್ಯಗಳು ಸೇರಿದಂತೆ ಬದುಕಿಗೆ ಹತ್ತಿರಾದ ಅಂಶಗಳೊಂದಿಗೆ ಸುಚೇಂದ್ರ ಪ್ರಸಾದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಾಹುಬಲಿ ಖ್ಯಾತಿಯ ಡ್ಯಾನಿ ಕುಟ್ಟಪ್ಪ ಈ ಸಿನಿಮಾದಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ.

ಈಗಾಗಲೇ ಈ ಸಿನಿಮಾವನ್ನು ವೀಕ್ಷಿಸಿರುವ ಚಿತ್ರರಂಗದ ಗಣ್ಯರು, ಸಾಹಿತ್ಯ ಲೋಕದ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜಶೇಖರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ಶ್ರೀನಿವಾಸ ಮೂರ್ತಿ, ಸುಂದರಶ್ರೀ, ನೀನಾಸಂ ಸಂದೀಪ್, ಚೈತ್ರ ಎಚ್.ಜಿ, ಸುಪ್ರಿಯಾ ಎಸ್ ರಾವ್, ರಂಜಿತಾ ಎಚ್, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಗೀತ ಗುಚ್ಛವನ್ನು ಸಿನಿಮಾ ರೂಪಕ್ಕೆ ತರುವ ಈ ಯತ್ನದಲ್ಲಿ ಲಹರಿ ಸಂಸ್ಥೆಯ ವೇಲು ಅವರು ಆಡಿಯೋ ಹಕ್ಕುಗಳನ್ನು ನೀಡುವ ಮೂಲಕ ಸಿನಿಮಾ ತಂಡಕ್ಕೆ ಬೆಂಬಲ ನೀಡಿದ್ದಾರೆ.
—-

Be the first to comment

Leave a Reply

Your email address will not be published. Required fields are marked *

Translate »
error: Content is protected !!