ಹೊಸ ಪ್ರತಿಭೆಗಳ ಮಾಸ್ಟರ್ ಮೈಂಡ್

ಹೊಸ ಪ್ರತಿಭೆಗಳೇ ಸೇರಿಕೊಂಡು ’ಮಾಸ್ಟರ್ ಮೈಂಡ್’ ಎನ್ನುವ ಮೂವತ್ತೆರಡು ನಿಮಿಷದ ಚಿತ್ರವೊಂದನ್ನು ಸಿದ್ದಪಡಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿರುವುದು ವಿಶೇಷ. ಬುದುವಾರದಂದು ಮಾದ್ಯಮದವರಿಗೆ ಚಿತ್ರವನ್ನು ತೋರಿಸಲಾಯಿತು.

ಕತೆ,ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವ ಎ.ವಿ.ಸುರೇಶ್ ಮಾತನಾಡಿ ಪಿಪಿಎಂ (ಪ್ರೊಡ್ಯುಸರ್ ಪ್ರಮೋ ಮೂವೀ) ಯೋಜನೆಯಲ್ಲಿ ಶುರು ಮಾಡಲಾಗಿದೆ. ಹೊಸಬರು ಚಿತ್ರ ಮಾಡಿದ ನಂತರ ಏನು ಮಾಡಬೇಕು, ಯಾರಿಗೆ ತೋರಿಸಬೇಕು ಇತ್ಯಾದಿ ಗೊಂದಲದಲ್ಲಿ ಇರುತ್ತಾರೆ. ಅಂತಹವರು ಸಿನಿಮಾವನ್ನು ಆನಂದ್ ಆಡಿಯೋ ಸಂಸ್ಥೆಗೆ ಕೊಡುವಾಗ ಪಿಪಿಎಂ ಜಾನರ್ ಅಡಿಯಲ್ಲಿ ಪ್ರಸಾರ ಮಾಡಲು ಕೋರಿಕೊಳ್ಳಬೇಕಾಗುತ್ತದೆ. ಅವರು ಅದೇ ವಿಭಾಗದ ಯೂ ಟ್ಯೂಬ್‌ದಲ್ಲಿ ಅಳವಡಿಸುತ್ತಾರೆ. ಇದನ್ನು ನೋಡಿದ ನಿರ್ಮಾಪಕರು ಚಿತ್ರಕ್ಕೆ ಬಂಡವಾಳವೂಡಲು ಮುಂದೆ ಬರುವುದರಿಂದ ತಂತ್ರಜ್ಘರು, ಕಲಾವಿದರುಗಳಿಗೆ ಅವಕಾಶ ಸಿಕ್ಕಂತೆ ಆಗುತ್ತದೆಂದು ಮಾಹಿತಿ ನೀಡಿದರು.

ಅತಿಥಿಯಾಗಿ ಆಗಮಿಸಿದ್ದ ಉಮೇಶ್‌ಬಣಕಾರ್ ಹೇಳುವಂತೆ ಪಿಪಿಎಂ ಯೋಜನೆಯನ್ನು ಯಾರು ಇಲ್ಲಿಯವರೆಗೂ ಮಾಡಿಲ್ಲ. ತಾವು ಹೊಸದಾಗಿ ಬರುವವರಿಗೆ ಮಾರ್ಗದರ್ಶನವನ್ನು ಇದರ ಮೂಲಕ ಕೊಡುತ್ತಿರುವುದು ಸಂತಸದ ವಿಷಯ. ಇಂತಹ ಸಿನಿಮಾಗಳಿಗೆ ಯೂ ಟ್ಯೂಬ್‌ನಿಂದ ಹಣ ಬರುವುದಿಲ್ಲ. ಮುಂದೆ ಕನಿಷ್ಟ ೯೧ ನಿಮಿಷದ ವರೆಗೆ ಚಿತ್ರ ಮಾಡಿರಿ ಎಂದು ಸಲಹೆ ನೀಡಿದರು.

ಸಿಂಹಬಲ ಮತ್ತು ಮಾಸ್ಟರ್ ಮೈಂಡ್ ಎನ್ನುವ ಇಬ್ಬರು ರೌಡಿಗಳ ರಾಜಕೀಯ ದೊಂಬರಾಟ ಜೊತೆಗೆ ಮಹಿಳಾ ಪ್ರಧಾನ ಅಂಶಗಳು ಮಿಶ್ರಣಗೊಂಡಿದೆ. ಕ್ಲೈಮಾಕ್ಸ್‌ದಲ್ಲಿ ಭಾಗ-2 ಬರುವಂತೆ ಚಿತ್ರಕತೆಯನ್ನು ಹಣೆಯಲಾಗಿದೆ. ತಾರಗಣದಲ್ಲಿ ಅನಂತುವಾಸುದೇವ್, ಹಿಮಾಮೋಹನ್, ಬಲರಾಂ, ಎ.ವಿ.ಸುರೇಶ್, ನಿಹಾಲ್‌ಗೌಡ, ಸದಾನಂದಗೌಡ, ಕುಶಾಲ್ ಮುಂತಾದವರು ನಟಿಸಿದ್ದಾರೆ. ಸಂಗೀತ ಲಲಿತ್‌ಕ್ರಿಷ್, ಛಾಯಾಗ್ರಹಣ ಸಾವದ್.ಎಂ, ಸಂಕಲನ ಹರೀಶ್-ಕೃಷ್ಣ ಅವರದು. ಬೆಂಗಳೂರು, ದೇವನಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಶೋಕ್.ಎನ್.ಶಿಂದೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!