ನಟ ಮಾಸ್ಟರ್ ಹಿರಣ್ಣಯ್ಯ ಅಗಲಿದ್ದಾರೆ. ಅವರ ಜನ್ಮನಾಮ ನರಸಿಂಹಮೂರ್ತಿ. ತಮ್ಮ ತಂದೆ, ಖ್ಯಾತ ರಂಗಭೂಮಿ ಕಲಾವಿದ ಕೆ.ಹಿರಣ್ಣಯ್ಯ ಅವರ ನೆರಳಿನಲ್ಲಿ ‘ಮಾಸ್ಟರ್ ಹಿರಣ್ಣಯ್ಯ’ ಎಂದೇ ಕರೆಸಿಕೊಂಡರು. ರಂಗದ ಮೇಲೆ ತಮ್ಮ ಮೊನಚು, ವ್ಯಂಗ್ಯ, ವಿಡಂಬನೆಯ ಮಾತುಗಳಿಂದ ಸಮಾಜದ ಭ್ರಷ್ಟ ವ್ಯವಸ್ಥೆಯನ್ನು ಬಯಲು ಮಾಡಿದವರು ಹಿರಣ್ಣಯ್ಯ. ‘ಲಂಚಾವತಾರ’, ‘ಭ್ರಷ್ಟಾಚಾರ’, ‘ಅನಾಚಾರ’, ‘ಕಪಿಮುಷ್ಟಿ,’ ‘ದೇವದಾಸಿ’, ‘ನಡುಬೀದಿ ನಾರಾಯಣ’, ‘ಪಶ್ಚಾತ್ತಾಪ’ ಅವರ ಕೆಲವು ಅತ್ಯಂತ ಜನಪ್ರಿಯ ನಾಟಕಗಳು. ಮುರಾರಿ, ತೀರ್ಥರೂಪು, ದತ್ತು, ನಾಜೂಕಯ್ಯ, ಕಸ್ತೂರಿ ಪಾತ್ರಗಳಲ್ಲಿ ಅವರು ಜನಮನ್ನಣೆ ಗಳಿಸಿದ್ದರು. ತಂದೆ ಹಿರಣ್ಣಯ್ಯ ನಿರ್ದೇಶಿಸಿದ ‘ವಾಣಿ’ ಚಿತ್ರದಲ್ಲಿ ಬಾಲನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರು ‘ಮೊದಲತೇದಿ’, ‘ಮುತ್ತೈದೆ ಭಾಗ್ಯ’, ‘ಕಚದೇವಯಾನಿ’, ‘ದೇವದಾಸಿ’, ‘ಆನಂದಸಾಗರ’, ‘ಋಣಮುಕ್ತಳು’, ‘ಶಾಂತಿನಿವಾಸ’, ‘ಗಜ’ ಅವರ ಅಭಿನಯದ ಪ್ರಮುಖ ಚಿತ್ರಗಳು. ಕತೆ, ಸಂಭಾಷಣೆ ರಚಿಸಿ ನಿರ್ದೇಶಿಸಿದ ಸಿನಿಮಾ ‘ಸಂಪ್ರದಾಯ. ‘ಎತ್ತಂಗಡಿ ಎಂಕ್ಟಪ್ಪ’, ‘ಗೃಹಲಕ್ಷ್ಮಿ’, ‘ಪುಣ್ಯಕೋಟಿ’, ‘ವಸುದೈವ ಕುಟುಂಬ’, ‘ಸೌಂದರ್ಯ ಲಹರಿ’ ಅವರ ಕೆಲವು ಜನಪ್ರಿಯ ಧಾರಾವಾಹಿಗಳು. ವೃತ್ತಿರಂಗಭೂಮಿಗೆ ಹೊಸ ಆಯಾಮ ತಂದುಕೊಟ್ಟ ಮಾಸ್ಟರ್ ಹಿರಣ್ಣಯ್ಯ ಅವರಿನ್ನು ನೆನಪು ಮಾತ್ರ.
Pingback: try this web-site
Pingback: Easton solar installer
Pingback: Fake Omega Constellation