Theatre ಚಿತ್ರಮಂದಿರಗಳಲ್ಲಿ ಮಾಸ್ಕ್ ಕಡ್ಡಾಯ

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲ ಕಠಿಣ ಕ್ರಮಗಳನ್ನು ತಗೆದುಕೊಂಡಿದ್ದು, ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಆರ್.ಅಶೋಕ್, ‘ಚಿತ್ರಮಂದಿರಕ್ಕೆ ಹೋಗುವವರು ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಹಾಕಿಕೊಳ್ಳದೇ ಚಿತ್ರಮಂದಿರಕ್ಕೆ ಬಂದರೆ, ಅವರಿಗೆ ಪ್ರವೇಶ ನೀಡಬಾರದು ಎಂದಿದ್ದಾರೆ.

ದೇಶಾದ್ಯಂತ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ರಾಜ್ಯ ಸರಕಾರ ತಗೆದುಕೊಳ್ಳಲಾಗುತ್ತಿದೆ. ತಜ್ಞರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ. ಕೇವಲ ಚಿತ್ರಮಂದಿರಗಳಿಗೆ ಮಾತ್ರವಲ್ಲ, ಹೊಸ ವರ್ಷಕ್ಕೂ ಒಂದು ಮಾರ್ಗಸೂಚಿ ಬಿಡುಗಡೆ ಆಗಿದ್ದು, ಸಭೆ ಸಮಾರಂಭದಲ್ಲೂ ಮಾಸ್ಕ್ ಹಾಕುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.

ಶಾಲಾ ಕಾಲೇಜುಗಳಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಮಕ್ಕಳು ಬರಬೇಕು ಎಂದು ಸರಕಾರ ಸೂಚಿಸಿದೆ.

ಹೊಸ ವರ್ಷಾಚರಣೆ ಪಾರ್ಟಿಯನ್ನು ಮಧ್ಯರಾತ್ರಿ ಒಂದು ಗಂಟೆ ಒಳಗೆ ಮುಗಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!