ನವೆಂಬರ್ 22ಕ್ಕೆ ಬಿಡುಗಡೆ ಆಗುತ್ತಿರುವ ಮರ್ಯಾದೆ ಪ್ರಶ್ನೆ ಸಿನಿಮಾದ ಮೊದಲ ಹಾಡನ್ನು ಪ್ರಮೋದ್ ಮರವಂತೆ ಅವರು ಬರೆದು ನಟ ಶರಣ್ ಹೃದಯಾ ಅವರು ಹಾಡಿದ್ದಾರೆ. ಮರ್ಯಾದೆ ಪ್ರಶ್ನೆ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಜಾನಪದ ಶೈಲಿಯಲ್ಲಿ ಕಂಪೋಸ್ ಮಾಡಿದ್ದಾರೆ.
ಈ ಹಾಡಿನಲ್ಲಿ ನಟರ ಪಾತ್ರದ ಪರಿಚಯದ ಜೊತೆ ಅವರು ಬದುಕುತ್ತಿರುವ ಮಧ್ಯಮ ವರ್ಗದ ಸಮಾಜವನ್ನು ಪರಿಚಯಿಸುವ ಸಲುವಾಗಿ ಸಾಂದರ್ಭಿಕವಾಗಿ ಈ ಹಾಡನ್ನು ಬಳಸಲಾಗಿದೆ ಎಂದು ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ತಿಳಿಸಿದ್ದಾರೆ.
ಈಗಾಗಲೇ ಬಿಡುಗಡೆ ಮಾಡಿರುವ ಕ್ಯಾರೆಕ್ಟರ್ ಪೋಸ್ಟರ್ ನಲ್ಲಿ ರಾಕೇಶ್ ಅಡಿಗ ಅವರು ಒಬ್ಬ ಕಾರ್ಯಕರ್ತನಾಗಿ ಸುನಿಲ್ ರಾವ್ ಅವರು ಒಬ್ಬ ಡೆಲಿವರಿಬಾಯಾಗಿ,ಪೂರ್ಣಚಂದ್ರ ಮೈಸೂರು ಕ್ಯಾಬ್ ಡ್ರೈವರ್ ಆಗಿ, ತೇಜು ಬೆಳ್ವಾಡಿ ಅವರು ಸೇಲ್ಸ್ ಗರ್ಲ್ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ.
ಮಧ್ಯಮ ವರ್ಗದ ಬಗ್ಗೆ ಇರುವ ಈ ಕತೆಯಲ್ಲಿ ಈ ಹಾಡು ತುಂಬಾ ಸೊಗಸಾದ ಸಾಹಿತ್ಯವನ್ನು ಒಳಗೊಂಡಿದೆ.ಈ ಹಾಡಿನ ಸಾಹಿತ್ಯದಲ್ಲಿ ಬರುವ ಪ್ರತಿ ಸಾಲುಗಳು ಧನಾತ್ಮಕ ಚಿಂತನೆಗೆ ಕರೆದೊಯ್ಯುತ್ತದೆ. ದಿನ ಬೆಳಗಾದರೆ ಕೇಳುವ ಹಾಡಾಗಿರಬೇಕು ಎಂಬುದು ಈ ಹಾಡಿನ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ.
ಈ ಹಾಡು ಸಕ್ಕತ್ ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಹೊಂದಿದ್ದು ಹಾಡಿಗೆ ಒಳ್ಳೆ ಅಭಿಪ್ರಾಯಗಳು ಮೂಡಿಬರುತ್ತಿದೆ.
Be the first to comment