ಮರ್ಯಾದೆ ಪ್ರಶ್ನೆ

ಅಮೇಜಾನ್ ಪ್ರೈಮ್ ನಲ್ಲಿ ‘ಮರ್ಯಾದೆ ಪ್ರಶ್ನೆ’

ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ 2024ರ ಅತ್ಯುತ್ತಮ ಕಂಟೆಂಟ್ ಸಿನಿಮಾ ‘ಮರ್ಯಾದೆ ಪ್ರಶ್ನೆ’ ಅಮೇಜಾನ್ ಪ್ರೈಮ್ ಒಟಿಟಿಗೆ ಎಂಟ್ರಿ ಕೊಟ್ಟಿದೆ.

ಅಮೆಜಾನ್‌ ಪ್ರೈಂಗೆ ಬಂದಿರುವ ಮರ್ಯಾದೆ ಪ್ರಶ್ನೆ ಚಿತ್ರವನ್ನು ಮನೆ ಮಂದಿ ಕುಳಿತು ಕಣ್ತುಂಬಿಕೊಳ್ಳುತ್ತಿದ್ದಾರೆ. ಆರ್ ಜೆ ಪ್ರದೀಪ್ ಹೆಣೆದ  ಕಥೆಯನ್ನು ನಾಗರಾಜ್ ಸೋಮಯಾಜಿ ತೆರೆಗೆ ತಂದಿದ್ದಾರೆ.  ಸಕ್ಕತ್ ಸ್ಟುಡಿಯೋ ಸಾಥ್ ಕೊಟ್ಟಿದೆ.

ಸುನಿಲ್ ರಾವ್, ಶೈನ್ ಶೆಟ್ಟಿ, ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ  ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮರ್ಯಾದೆ ಪ್ರಶ್ನೆ ಸಿನಿಮಾಗೆ ಸಂದೀಪ್ ವಲ್ಲೂರಿ ಛಾಯಾಗ್ರಹಣ,  ಅರ್ಜುನ್ ರಾಮು ಸಂಗೀತ ನಿರ್ದೇಶನ ಮಾಡಿದ್ದಾರೆ.

ಕಳೆದ ನವೆಂಬರ್ 22ರಂದು ಚಿತ್ರಮಂದಿರಕ್ಕೆ ಬಂದ ‘ಮರ್ಯಾದೆ ಪ್ರಶ್ನೆ’ ಚಿತ್ರ ಕಥೆ, ನಿರ್ದೇಶನ, ತಾರಾಬಳಗ, ಅಭಿನಯ ಸೇರಿದಂತೆ ಎಲ್ಲಾ ಆಂಗಲ್ ಗಳಿಂದ ಸಿನಿರಸಿಕರನ್ನು ಆಕರ್ಷಿಸಿತ್ತು.

ಗಟ್ಟಿ ಕಂಟೆಂಟ್ ಜೊತೆಗೆ ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದ ಈ ಚಿತ್ರವನ್ನು ಎಲ್ಲರೂ‌ ಕೊಂಡಾಡುತ್ತಿದ್ದಾರೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಸೇಡಿನ ಕಥೆಯನ್ನು ಕುಟುಂಬ ಸಮೇತರಾಗಿ  ನೋಡಿ  ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!