Martin: ಕ್ರೇಜ್ ಹುಟ್ಟು ಹಾಕಿದ ಮಾರ್ಟಿನ್ ಟೀಸರ್

ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟೀಸರ್ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿ ಹಾಕಿದೆ.

ಟೀಸರ್​ ಕುರಿತು ಒಳ್ಳೆ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನು ಕೆಲವರು ಚಿತ್ರದ ಟೀಸರ್ ಹೀಗೆ ಇರುತ್ತದೆ ಅಂತ ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

ಟೀಸರ್​​ನಲ್ಲಿ ಚಿತ್ರದ ಭರ್ಜರಿ ಆಕ್ಷನ್​ಗಳ ಝಲಕ್ ಸಿಕ್ಕಿದೆ. ಧ್ರುವ ಸರ್ಜಾ ಪಾತ್ರ ಪರಿಚಯವೂ ಇದೆ. ಇದರಲ್ಲಿ ಕ್ರೌರ್ಯ ಕಾಣುತ್ತದೆ. ಆದರೆ ಈ ಕ್ರೌರ್ಯ ಯಾತಕ್ಕಾಗಿ ಅನ್ನೋದು ಮಾತ್ರ ಸಸ್ಪೆನ್ಸ್ ಆಗಿಯೇ ಇದೆ. ಡೈರೆಕ್ಟರ್ ಎ. ಪಿ. ಅರ್ಜುನ್ ಅದನ್ನು ಟೀಸರ್​​ನಲ್ಲಿ ಬಿಟ್ಟು ಕೊಟ್ಟಿಲ್ಲ.

ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾರ್ಟಿನ್ ಬೇರೆ ರೀತಿಯಾಗಿ ಇದೆ. ತಾಜಾತನದಿಂದ ಟೀಸರ್ ಕೂಡಿದೆ ಅಂತಲೇ ಹೇಳಬಹುದು.

ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನಲ್ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ. ಒಟ್ಟಾರೆ ಮಾರ್ಟಿನ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!