ಮಾರ್ಟಿನ್

ಸೆ. 3ರಂದು ‘ಮಾರ್ಟಿನ್’ ಸಾಂಗ್ ರಿಲೀಸ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ನಟನೆಯ ‘ಮಾರ್ಟಿನ್’ ಸಿನಿಮಾದ ಲವ್ ಸೆಪ್ಟೆಂಬರ್ 3 ರಂದು ಮಧ್ಯಾಹ್ನ 12. ಗಂಟೆ 12 ನಿಮಿಷಕ್ಕೆ ರಿಲೀಸ್ ಆಗುತ್ತಿದೆ.

ವೈಭವಿ ಶ್ಯಾಂಡಿಲ್ಯ ಮತ್ತು ಧ್ರುವ ಸರ್ಜಾ ರೋಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.  ಧ್ರುವ ಸರ್ಜಾ ಕಪ್ಪು ಬಣ್ಣದ ಡ್ರೆಸ್,  ಸನ್ ಗ್ಲಾಸ್‌  ಧರಿಸಿದ್ದಾರೆ. ವೈಭವಿ ಶ್ಯಾಂಡಿಲ್ಯ  ಸೀರೆಯುಟ್ಟು ಚೆಂದಗೆ ಕಾಣಿಸುತ್ತಿದ್ದಾರೆ.

ಮಾರ್ಟಿನ್ ಚಿತ್ರದಲ್ಲಿ ಲವ್ ಟ್ರ್ಯಾಕ್ ಕೂಡ ಇದೆ. ಆದರೆ ಈ   ಟ್ರ್ಯಾಕ್ ಅರ್ಧ ಕಥೆ ಸಾಗಿದ ಮೇಲೆ ಬರುತ್ತದೆ.  ಸಿನಿಮಾದಲ್ಲಿ ಹೆಚ್ಚಿನ ಭಾಗ ಆಕ್ಷನ್ ಇದೆ ಅನ್ನೋ ವಿಷಯ  ಕೂಡ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.

ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ಒಟ್ಟು 13 ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. 100ಕೋಟಿಗೂ ಹೆಚ್ಚು ಇನ್ವೆಸ್ಟ್ ಮಾಡಿರೋ ಈ ಸಿನಿಮಾದ ಬ್ಯುಸಿನೆಸ್  ಜೋರಾಗೆ ನಡೆಯುತ್ತಿದೆ ಅನ್ನೋ ಮ್ಯಾಟರ್  ಗಾಂಧಿನಗರದಲ್ಲಿ ಗುಲ್ಲೆಬ್ಬಿದೆ.

ಎ.ಪಿ.ಅರ್ಜುನ್ ಈ ಸಿನಿಮಾ  ಡೈರೆಕ್ಷನ್ ಮಾಡಿದ್ದಾರೆ. ಅರ್ಜುನ್ ಸರ್ಜಾ ಕಥೆ,  ಉದಯ್ ಮೆಹ್ತಾ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ.  ರವಿ ಬಸ್ರೂರು ಚಿತ್ರಕ್ಕೆ ಹಿನ್ನೆಲೆ ಸಂಗೀತ,  ರವಿ ವರ್ಮ ಮತ್ತು ರಾಮ್ ಲಕ್ಷ್ಮಣ  ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!