ಆಗಸ್ಟ್ 5ರಿಂದ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರದ ಶೂಟಿಂಗ್ ಪುನರಾರಂಭವಾಗಲಿದೆ.
ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿರುವ ಧ್ರುವ ಸರ್ಜಾ ಆಗಸ್ಟ್ 5ರಿಂದ ಆರಂಭವಾಗುವ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರ ತಂಡ ಹೇಳಿದೆ.
28 ದಿನಗಳ ಕಾಲ ಶೂಟಿಂಗ್ ಬಾಕಿ ಉಳಿದಿದೆ. ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಬೇಕಿದೆ ಎಂದು ನಿರ್ದೇಶಕ ಎಪಿ ಅರ್ಜುನ್ ಹೇಳಿದ್ದಾರೆ.
ಈ ಮೊದಲು ಚಿತ್ರವನ್ನು ಸೆಪ್ಬಂಬರ್ 30 ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಇತ್ತೀಚೆಗೆ ಧ್ರುವ ಸರ್ಜಾ ಅವರ ಅಜ್ಜಿ ಅನಾರೋಗ್ಯದಿಂದಾಗಿ ನಿಧನರಾಗಿದ್ದರು. ಹೀಗಾಗಿ ದಿನಾಂಕ ಮರು ಹೊಂದಿಸಲು ಶೂಟಿಂಗ್ ಮುಂದೂಡಬೇಕಾಯಿತು. ಶೀಘ್ರವೇ ರಿಲೀಸ್ ಹೊಸ ದಿನಾಂಕ ಘೋಷಣೆ ಆಗಲಿದೆ.
ಧ್ರುವ ಅವರಿಗೆ ನಾವು ಅವರಿಗೆ ತೊಂದರೆ ಕೊಡಲು ಬಯಸಲಿಲ್ಲ. ಈ ಶೂಟಿಂಗ್ ವೇಳೆ ನಾವು ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸಿದ್ದಾರೆ. ವೈಭವಿ ಶಾಂಡಿಲ್ಯ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ಸುಕೃತಾ ವಾಗ್ಲೆ ಮತ್ತು ಅನ್ವೇಶಿ ಜೈನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿ ಶರ್ಮಾ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ.
___

Be the first to comment