ಎ.ಪಿ. ಅರ್ಜುನ್ ನಿರ್ದೇಶಿಸಿರುವ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ಕ್ಕೆ ತೆರೆಗೆ ಬರಲಿದೆ.
‘ನನಗೆ ಮತ್ತು ಧ್ರುವ ಸರ್ಜಾ ಅವರಿಗೆ ಹೋದಲೆಲ್ಲ ‘ಮಾರ್ಟಿನ್’ ಏಕೆ ತಡ ಎಂದು ಕೇಳುತ್ತಿದ್ದರು. ಚಿತ್ರದ ವ್ಯಾಪ್ತಿ ದೊಡ್ಡದಿದೆ. ಸಿನಿಮಾದಲ್ಲಿ ಎರಡು ಗಂಟೆಗಳಷ್ಟು ಗ್ರಾಫಿಕ್ಸ್ ಇದೆ. ಹೀಗಾಗಿ ಚಿತ್ರ ತಡವಾಯ್ತು. ಅ.11ಕ್ಕೆ ಖಚಿತವಾಗಿ ತೆರೆಗೆ ಬರುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ ಪ್ರಚಾರಕ್ಕೆ ಸಮಯ ಬೇಕು. ಅಂತರರಾಷ್ಟ್ರೀಯ ಗುಣಮಟ್ಟದ ವಿಷ್ಯುವಲ್ಸ್ ಇದೆ. ಒಂದೇ ಒಂದು ದೃಶ್ಯವನ್ನು ಮರು ಚಿತ್ರೀಕರಣ ಮಾಡಿಲ್ಲ. ಕನ್ನಡದಲ್ಲಿ ಇಷ್ಟು ದೊಡ್ಡ ಬಜೆಟ್‌ನ ಸಿನಿಮಾ ಬಂದಿಲ್ಲ’ ಎಂದಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್.
‘ಮಾರ್ಟಿನ್ ಚಿತ್ರವನ್ನು 250 ದಿನ ಚಿತ್ರೀಕರಣ ಮಾಡಿದ್ದೇವೆ. ಇದೊಂದು ತಂತ್ರಜ್ಞರ ಸಿನಿಮಾ. ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಸಿನಿಮಾದಲ್ಲಿ ಆ ಶ್ರದ್ಧೆ ಕಾಣಿಸುತ್ತದೆ. ಸಿನಿಮಾಕ್ಕೆ ಜನ ಬರುತ್ತಿಲ್ಲ, ಸ್ಟಾರ್ ನಟರು ಸಿನಿಮಾ ಮಾಡುತ್ತಿಲ್ಲ ಎಂಬ ದೂರಿದೆ. ಇನ್ನು ಮುಂದೆ ಎಚ್ಚರ ವಹಿಸುತ್ತೇವೆ” ಎಂದಿದ್ದಾರೆ ಧ್ರುವ ಸರ್ಜಾ.
ಭಾರತ-ಪಾಕಿಸ್ತಾನದ ನಡುವಿನ ದೇಶಭಕ್ತಿಯ ಕಥೆ ಹೊಂದಿರುವ ‘ಮಾರ್ಟಿನ್’ನಲ್ಲಿ ವೈಭವಿ ಶಾಂಡಿಲ್ಯ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ರವಿ ಬಸ್ರೂರು ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ.
Be the first to comment